ಬೆಳಗಾವಿ

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಬೆಳಗಾವಿ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಸಂಕೇಶ್ವರ ಪೊಲೀಸರು ಯಶಸ್ವಿಯಾಗಿದ್ದು ಬಂಧಿತರಿಂದ ಸಾವಿರಾರು ರೂಪಾಯಿ ಮೌಲ್ಯದ ಗಾಂಜಾ ವಶಕ್ಕೆ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಈ ಅಕ್ರಮ ಗಾಂಜಾ ಸಾಗಾಟ ಪ್ರಕರಣದಲ್ಲಿ ಮಲಿಕಜಾನ ಮಹಮ್ಮದ ಅಲಿ ಭಾಗವಾನ್ ಸಾಕಿನ ಹುಕ್ಕೇರಿ ಹಾಗೂ ಲಕ್ಷ್ಮಣ ನೇತಾಜಿ ಘೆವಡೆ ಸಾಕಿನ ಸಂಕೇಶ್ವರ ಇವರನ್ನು ಬಂಧಿಸಲಾಗಿದೆ.

ಇನ್ನೂ ಈ ದಾಳಿ ಖಚಿತ ಮಾಹಿತಿ ಮೇರೆಗೆ ಸಂಕೇಶ್ವರ ಸಮೀಪದ ಕಮತನೂರ ಗೇಟ ಬಳಿ ಸಂಕೇಶ್ವರ ಠಾಣೆಯ ಪಿ.ಎಸ.ಐ. ಗಣಪತಿ ಕುಗನೊಳಿ ನೇತೃತ್ವದ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಬಂದಿತರಿಂದ 300 ಗ್ರಾಮ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಈ ದಾಳಿಯಲ್ಲಿ ಪೊಲೀಸ ಸಿಬ್ಬಂದಿಗಳಾದ ಬಿ.ಕೆ.ನಾಗನುರೆ , ಎಮ.ಎಮ.ಜಂಬಗಿ , ಬಿ.ಎಸ.ಕಪರಟ್ಟಿ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button