ಬೆಳಗಾವಿ

ನೆರೆ ಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ; ಪರಿಹಾರ ಕೊಡಿಸುವ ಭರವಸೆ

ಬೆಳಗಾವಿ: ಮಳೆಯಿಂದ ಹಾನಿಯಾಗಿರುವ ಬೆಳಗಾವಿ ಜಿಲ್ಲೆ ಖಾನಾಪುರ ಪಟ್ಟಣದಲ್ಲಿ ನೆರೆಪೀಡಿತ ಪ್ರದೇಶಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬೆಳಗಾವಿ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಿದ್ದರಾಮಯ್ಯ ಅವರು ಪ್ರವಾಹದ ಪರಿಶೀಲನೆ ನಡೆಸುವ ವೇಳೆ ಅವರ ಎದುರು ನೆರೆ ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.‌ ನಮ್ಮ ಗಲ್ಲಿಗೆ ಬಂದು ನಮ್ಮ ಮನೆ ನೋಡಿ ಬನ್ನಿ ಸರ್ ಎಂದು ಅಳಲು ಸಂತ್ರಸ್ತರು ಅಳಲು ತೊಡಗಿಕೊಂಡಿದ್ದಾರೆ. ‌

ನೆರೆ ಸಂತ್ರಸ್ತರು ಅಳಲು ತೊಡಿಕೊಳ್ಳುತ್ತಲೆ ಮಹಿಳೆಗೆ ಆಯ್ತಮ್ಮ ನಾವು ಸರ್ಕಾರದಲ್ಲಿ ಇಲ್ಲ ಎಂದಿರುವ ಸಿದ್ದರಾಮಯ್ಯ ಅವರು ಅಧಿವೇಶನ ಕರೆದು ನೆರೆ ಪರಿಹಾರ ಬಗ್ಗೆ ಚರ್ಚಿಸಲು ಒತ್ತಾಯ ಮಾಡ್ತೇನೆ.‌ ಪರಿಹಾರ ಕೊಡಿಸುವಂತೆ ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.

ಅಲ್ಲದೆ 2019ರ ನೆರೆ ಪರಿಹಾರವನ್ನು ಕೂಡ ಕೇಂದ್ರ ಸರ್ಕಾರ ನಿಡಿಲ್ಲಾ ಈಗಲಾದರೂ ಸಮರ್ಪಕಾಗಿ ಪರಿಹಾರ ಕಾರ್ಯ ಕೈಗೊಳ್ಳಬೇಕು, ಇಲ್ಲಿನ ಪರಿಸ್ಥಿತಿ ಅವಲೋಕಿಸಿ ಸರ್ಕಾರವನ್ನು ನಾನು ಒತ್ತಾಯಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button