ಬೆಳಗಾವಿ

ಶಶಿಕಲಾ ಜೊಲ್ಲೆ ಹಾಗೂ ಪರಣ್ಣ ಮುನವಳ್ಳಿ ವಿರುದ್ಧ ಎಸಿಬಿಗೆ ದೂರು

ಬೆಳಗಾವಿ: ಅಂಗನವಾಡಿಗಳಲ್ಲಿ ವಿತರಿಸುವ ಮೊಟ್ಟೆಗಳ ಖರೀದಿ ಟೆಂಡರ್‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕುರಿತು ಟಿವಿ ವಾಹಿನಿಯೊಂದರಲ್ಲಿ ಪ್ರಸಾರವಾದ ವರದಿ ಆಧರಿಸಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಪರಣ್ಣ ಮುನವಳ್ಳಿ, ಚಿಕ್ಕೋಡಿಯ ಸಾಯಿನಗರ ನಿವಾಸಿ ಸಂಜಯ ಹರಗೆ ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಪ್ರಶಾಂತ ಘಾಟಗೆ ವಿರುದ್ಧ ಇಲ್ಲಿನ ವಕೀಲ ಸುರೇಂದ್ರ ಉಗಾರೆ ಲೋಕಾಯುಕ್ತ ಎಸ್ಪಿ ಕಚೇರಿಗೆ ಸೋಮವಾರ ದೂರು ನೀಡಿದ್ದಾರೆ.

‘ಟೆಂಡರ್‌ನಲ್ಲಿ ಅಕ್ರಮ ಮಾಡಿರುವ ಗುರುತರ ಆರೋಪ ಸಚಿವರ ಮೇಲೆ ಬಂದಿದೆ. ಅಕ್ರಮವಾಗಿ ಹಣ ಪಡೆಯುವುದು ಅಪರಾಧ ಎನ್ನುವುದು ಗೊತ್ತಿದ್ದರೂ ಭ್ರಷ್ಟಾಚಾರ ಎಸಗಿದ್ದಾರೆ. ಈ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಇಲ್ಲಿನ ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ಅವರು ಕೂಡ ಸಚಿವೆ ಶಶಿಕಲಾ ಮತ್ತು ಶಾಸಕ ಪರಣ್ಣ ವಿರುದ್ಧ ಎಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button