ಭಿಕ್ಷಾಟನೆ ಮಾಡುತ್ತಿದ್ದ ಐವರು ಮಹಿಳೆಯರ ಬಂಧನ; 15 ಮಕ್ಕಳ ರಕ್ಷಣೆ

ಬೆಳಗಾವಿ: ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಪೊಲೀಸರ ನೇತೃತ್ವದಲ್ಲಿ ಮಕ್ಕಳ ಕಲ್ಯಾಣ ಸಮಿತಿವರು ಜಂಟಿ ತಂಡದೊಂದಿಗೆ ಇಂದು ಮಧ್ಯಾಹ್ನ ಬೆಳಗಾವಿಯ ಚನ್ನಮ್ಮಾ ವೃತ್ತ, ಬಸ್ ನಿಲ್ದಾಣ, ರಾಮದೇವ ವೃತ್ತ, ಕೆ.ಎಲ್.ಇ ಆಸ್ಪತ್ರೆಯವರೆಗೂ ಮತ್ತು ರೇಲ್ವೆ ಸ್ಟೇಷನ ನಗರದ ಮುಂತಾದ ಪ್ರದೇಶಗಳಲ್ಲಿ ಆಪರೇಷನ್ ಮುಸ್ಕಾನ್ ಕಾರ್ಯಕ್ರಮದಲ್ಲಿ ಬಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆಯಲ್ಲಿ 18 ವರ್ಷ ಮೇಲ್ಪಟ್ಟ 5 ಮಹಿಳೆಯರು, 6 ವರ್ಷದ ಒಳಗಿನ 5, ಮತ್ತು 6ರಿಂದ 12 ವರ್ಷದೊಳಗಿನ 3 ಮಕ್ಕಳನ್ನು ಬಿಕ್ಷಾಟನೆಯಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿದ್ದಾರೆ.
ಮಕ್ಕಳನ್ನು ರಕ್ಷಣೆ ಮತ್ತು ಪೋಷಣೆಗಾಗಿ ಕ್ವಾರಂಟೈನ್‌ಗಾಗಿ ಸಂಸ್ಥೆಗಳಲ್ಲಿ ಅಭಿರಕ್ಷಣೆಗೆ ಇರಿಸಲಾಗಿದ್ದು. ಮುಂದಿನ ದಿನಗಳಲ್ಲಿ ಮಕ್ಕಳ ಮತ್ತು ಮಹಿಳೆಯರ ಸೂಕ್ತ ಮಾಹಿತಿಯನ್ನು ಪಡೆದು ಮೇಲಾಧಿಕಾರಿಗಳ ಆದೇಶದ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ತಿಳಿಸಿದ್ದಾರೆ.
ಈ ಐದು ಕುಟುಂಬಗಳಲ್ಲಿ ೨ ಕುಟುಂಬಗಳು ಬೆಳಗಾವಿ ಜಿಲ್ಲೆಗೆ ಸೇರಿದವರಾಗಿದ್ದು, ಇನ್ನುಳಿದ ಕುಟುಂಬಗಳು ರಾಜಸ್ಥಾನ ರಾಜ್ಯಕ್ಕೆ ಸೇರಿದವರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.




