ಬೆಳಗಾವಿ

ಬೆಳಗಾವಿ ಗಾಲ್ಫ್ ಗ್ರೌಂಡ್ ಬಳಿ ಚಿರತೆ ಪ್ರತ್ಯಕ್ಷ; ಅಧಿಕಾರಿಗಳು ದೌಡು

ಬೆಳಗಾವಿ: ಬೆಳಗಾವಿಯ ಹನುಮಾನ ನಗರಕ್ಕೆ ಹೊಂದಿಕೊಂಡಿರುವ ಗಾಲ್ಫ್ ಗ್ರೌಂಡ್ ನಲ್ಲಿ ಇಂದು ಬೆಳಗಿನ ಜಾವ ಚಿರತೆ ಕಂಡಿದೆ ಎಂದು ಜನರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ತಂಡ ಅಲ್ಲಿಗೆ ಧಾವಿಸಿದೆ.ಗಾಲ್ಫ್ ಮೈದಾನದಲ್ಲಿ ಚಿರತೆ ಹುಡುಕಾಟಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಗಾಲ್ಫ್ ಗ್ರೌಂಡಕ್ಕೆ ಆಗಮಿಸಿದ್ದು ಚಿರತೆಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಇಂದು ಬೆಳಿಗ್ಗೆ ವಾಕಿಂಗ್ ಮಾಡಲು ಗಾಲ್ಫ್ ಮೈದಾನಕ್ಕೆ ಹೋದ ಕೆಲವು ವಾಯು ವಿಹಾರಿಗಳಿಗೆ,ಚಿರತೆ ಕಾಣಿಸಿಕೊಂಡಿದೆ,ಚಿರತೆ ಕಂಡು ಹೆದರಿದ ಅವರು ತಕ್ಷಣ ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

ಬೆಳಗಾವಿಯ ಗಾಲ್ಫ್ ಗ್ರೌಂಡ್ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ. ಲಾಕ್ ಡೌನ್ ನಿಂದಾಗಿ ಗಾಲ್ಫ್ ಗ್ರೌಂಡ್ ಕೂಡ ನಿಶಬ್ಧವಾಗಿತ್ತು ಹೀಗಾಗಿ ಇಲ್ಲಿ ಚಿರತೆ ಬಂದಿರುವ ಎಲ್ಲ ಸಾಧ್ಯತೆಗಳಿವೆ.

Spread the love

Related Articles

Leave a Reply

Your email address will not be published. Required fields are marked *

Back to top button