ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಕೆಲಸ ದೇಶದ ಚುಕ್ಕಾಣಿ ಹಿಡಿದವರಿಂದ ನಡೆಯುತ್ತಿದೆ: ಸಿ ನಾರಾಯಣ ಸ್ವಾಮಿ

ದೇವನಹಳ್ಳಿ‘: ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ (ಆರ್‌ಜಿಪಿಆರ್‌ಎಸ್) ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕವಾಗಿರುವ ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಅವರನ್ನು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ವತಿಯಿಂದ ದೇವನಹಳ್ಳಿಯ ಪ್ರವಾಸಿ ಮಂದಿರದಲ್ಲಿ ಭಾನುವಾರ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ ನಾರಾಯಣ ಸ್ವಾಮಿ ಅವರು ಪಂಚಾಯತ್ ರಾಜ್ ವ್ಯವಸ್ಥೆಯು ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿಯಾಗಿದ್ದು ಜನರ ಕೈಗೆ ಅಧಿಕಾರ ಹಂಚಿಕೆಯಾಗಬೇಕು ಎಂಬುದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕನಸಾಗಿತ್ತು. ಅಂತೆಯೇ 73 ನೇ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿ ಅದನ್ನು ಜಾರಿಗೆ ತಂದವರು ಪಿವಿ ನರಸಿಂಹರಾವ್ ಅವರು 1992 ರಲ್ಲಿ ಸಂಸತ್ತಿನ ಒಪ್ಪಿಗೆ ಪಡೆದು. 24 ಏಪ್ರಿಲ್ 1993 ರಲ್ಲಿ ಜಾರಿಗೆ ಬಂದಿತು. ಅದ್ದರಿಂದ ಎಪ್ರಿಲ್ 24 ನ್ನು ಪಂಚಾಯತ್ ರಾಜ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಎಂದು ಸಿ ನಾರಾಯಣ ಸ್ವಾಮಿ ಅವರು ಪಂಚಾಯತ್ ರಾಜ್ ನ ಇತಿಹಾಸವನ್ನು ವಿವರಿಸಿದರು.
ದೇಶದಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವಂತಹ ಕೆಲಸ ದೇಶದ ಚುಕ್ಕಾಣಿ ಹಿಡಿದವರಿಂದ ನಡೆಯುತ್ತಿದೆ. ಪ್ರಜಾಪ್ರಭುತ್ವದಲ್ಲಿ ನಾವು ಪ್ರಧಾನಿ ಯವರ ಸ್ಥಾನಕ್ಕೆ ತುಂಬಾ ಗೌರವ ನೀಡುತ್ತೇವೆ ಆದರೆ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು, ಬೇರೆ ಬೇರೆ ರಾಜ್ಯಗಳಿಂದ ಜನರನ್ನು ಕರೆತಂದು ಸೇರಿಸಿದ ಜನರನ್ನು ನೋಡಿ ಇಷ್ಟೊಂದು ಜನ ಸೇರಿರುವ ಸಭೆಯಲ್ಲಿ ನಾನೆಂದೂ ಭಾಗವಹಿಸಿಲ್ಲ ಎಲ್ಲಿಯವರೆಗೆ ಕಣ್ಣಾಯಿಸಿದರೂ ನನಗೆ ಜನರೇ ಕಾಣುತ್ತಿದ್ದಾರೆ ಎಂದು ಭಾಷಣ ಮಾಡಿದ ದಿನಗಳಲ್ಲಿ ದೇಶದಲ್ಲಿ ಕೊರೊನಾ ಎರಡನೇ ಅಲೆ ಕಾಲಿಟ್ಟಿತ್ತು ಮತ್ತು ಅಲ್ಲಿ ಚುನಾವಣೆಯನ್ನು ಗೆಲ್ಲುವ ಒಂದೇ ಉದ್ದೇಶದಿಂದ ಮಮತಾ ಬ್ಯಾನರ್ಜಿಯವರನ್ನು ತುಚ್ಚವಾಗಿ ಮಾತನಾಡಿ ಪ್ರಧಾನಿ ಸ್ಥಾನದ ಗೌರವಕ್ಕೆ ಚ್ಯುತಿ ತರುವ ರೀತಿಯಲ್ಲಿ ನಡೆದುಕೊಂಡರು ಎಂದು ವಿಷಾದ ವ್ಯಕ್ತಪಡಿಸಿದರು.
ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ಒಂದೇ ಎಂಬ ಭಾವನೆಯಿಂದ ಬಾಳುವಂತಹ ವಾತಾವರಣದಿಂದ ಕೂಡಿದ ಸಮಸಮಾಜದ ನಿರ್ಮಾಣಕ್ಕೆ ಇಂದಿನ ಯುವಕರು ಶ್ರಮಿಸಬೇಕು ಸಮಾಜದಲ್ಲಿ ಸಮುದಾಯಗಳ ನಡುವೆ ಧರ್ಮಗಳ ನಡುವೆ ಪರಸ್ಪರ ದ್ವೇಷ ಹುಟ್ಟಿಸುವ ಜನರ ಬಗ್ಗೆ ಎಚ್ಚರಿಕೆ ವಹಿಸಬೇಕು ಇಂದು ರಾಜಕಾರಣ ಮಾಡಲು ಕೆಲವು ಪಕ್ಷಗಳು ಯಾವ ಮಟ್ಟಕ್ಕಾದರು ಇಳಿದು ಬಿಡುತ್ತವೆ ಆದರೆ ಎಲ್ಲರನ್ನೂ ಜೊತೆಯಲ್ಲಿ ಕೂಡಿಕೊಂಡು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಕಾಂಗ್ರೆಸ್ ಅವಿರತವಾಗಿ ಶ್ರಮಿಸುತ್ತಿದೆ ಎಂದು ಸಿ ನಾರಾಯಣ ಸ್ವಾಮಿ ತಿಳಿಸಿದರು.
ನಂತರ ಮಾತನಾಡಿದ ಮಾಜಿ ಶಾಸಕ ವೆಂಕಟಸ್ವಾಮಿ, ಸಿ.ನಾರಾಯಣಸ್ವಾಮಿ ಅವರ ರಾಜಕೀಯದ ಅನುಭವವನ್ನು ಪ್ರತಿಯೊಬ್ಬರು ಮೈಗೊಡಿಸಿಕೊಳ್ಳಬೇಕಿದೆ. ಪಂಚಾಯತ್ ರಾಜ್ ಬಗ್ಗೆ ಅಪಾರ ಅನುಭವಿಯಾಗಿರುವ ಅವರ ಮಾರ್ಗದರ್ಶನ ಸಮಾಜಕ್ಕೆ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಮುನಿನರಸಿಂಹಯ್ಯ, ಕೆಪಿಸಿಸಿ ಪ್ರಧಾನ ಕಾರ್ಯಧರ್ಶಿ ಎಸಿ.ಶ್ರೀನಿವಾಸ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಪ್ರಸನ್ನಕುಮಾರ್, ರಾಮಚಂದ್ರಪ್ಪ, , ತೂಬಗೆರೆ ರಂಗಪ್ಪ, ಉಪಾಧ್ಯಕ್ಷ ದ್ಯಾವರಹಳ್ಳಿ ಶಾಂತಕುಮಾರ್,
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆಸಿ.ಮಂಜುನಾಥ್, ಪಕ್ಷದ ಹಿರಿಯ ಮುಖಂಡರಾದ ಜಗನ್ನಾಥ್, ಚಂದೇನಹಳ್ಳಿ ಮುನಿಯಪ್ಪ,, ಖಾದಿಬೋರ್ಡ್ ಮಾಜಿ ಅಧ್ಯಕ್ಷ ಲಕ್ಷ್ಮಣ್ ಮೂರ್ತಿ, ಲಕ್ಷ್ಮಣ್ ಗೌಡ, ಬುಳ್ಳಹಳ್ಳಿ ರಾಜಪ್ಪ, ಶ್ರೀರಾಮಪ್ಪ ಯುವ ಮುಖಂಡರುಗಳಾದ ನರಗನಹಳ್ಳಿ ನಾಗೇಶ್ ಶ್ರೀನಿವಾಸ್ , ಕೋದಂಡರಾಮ್ ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.




