ಬೆಂಗಳೂರು ಗ್ರಾಮಾಂತರ

ವೈದ್ಯರಿಗೆ ಸನ್ಮಾನ

ದೇವನಹಳ್ಳಿ: ರಾಷ್ಟ್ರೀಯ ವೈದ್ಯ ದಿನವಾದ ಇಂದು, ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯ ಆಕಾಶ್ ಆಸ್ಪತ್ರೆಯ ಆವರಣದಲ್ಲಿ ಗುರುವಾರ ವೈದ್ಯರುಗಳಿಗೆ ಸನ್ಮಾನ ಮತ್ತು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಕೊರೊನಾ ಮಹಾಮಾರಿ ನಮ್ಮನ್ನು ಕಾಡಿದಾಗ ಹತ್ತಿರದವರು ಇರಲಿ ನಮ್ಮ ರಕ್ತ ಸಂಬಂಧಿಗಳು ಕೂಡ ನಮ್ಮ ಸಮೀಪ ಸುಳಿಯುವುದಿಲ್ಲ ಎಂಬುವುದನ್ನು ಕೋವಿಡ್-19 ಜಗತ್ತಿಗೆ ತೋರಿಸಿಕೊಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ರೋಗಿಗಳ ಸಮೀಪದಲ್ಲೇ ನಿಂತು, ಹಗಲು-ರಾತ್ರಿ, ಮನೆ ಮಕ್ಕಳನ್ನು ಮರೆತು ವಾರಗಳು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಉಳಿದು, ಜನರ ಪ್ರಾಣ ಉಳಿಸುವ ದೃಷ್ಟಿಯಿಂದ ಕರ್ತವ್ಯ ಬದ್ಧತೆಯಿಂದ ಸೇವೆ ಮಾಡಿ, ಸೋಂಕಿತರ ಪ್ರಾಣಗಳನ್ನು ಉಳಿಸಿಕೊಟ್ಟ ವೈದ್ಯರುಗಳನ್ನು ಎಲ್ಲರೂ ಗೌರವದಿಂದ ಕಾಣಬೇಕು, ಅದ್ದರಿಂದ ರಾಷ್ಟ್ರೀಯ ವೈದ್ಯರ ದಿನವಾದ ಇಂದು ನಮ್ಮ ಆಸ್ಪತ್ರೆಯಲ್ಲಿ ಅವರನ್ನು ಗೌರವಿಸಿ, ಅವರ ಸೇವೆಗೆ ಬೆಲೆ ಕಟ್ಟಲಾಗದೆ, ನಮ್ಮ ಋಣ ತೀರಿಸುವ ಸಣ್ಣ ಪ್ರಯತ್ನ ಇದಾಗಿದೆ ಎಂದು, ವೈದ್ಯರುಗಳನ್ನು ಸನ್ಮಾನ ಮಾಡಿ, ದೇವನಹಳ್ಳಿ ಆಕಾಶ್ ಆಸ್ಪತ್ರೆಯ ವ್ಯವಸ್ಥಾಪಕ ಮುನಿರಾಜು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ವೈದ್ಯ ದಿನವಾದ ಇಂದು ಸಾರ್ವಜನಿಕರಿಗೆ. ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಕೂಡ ಆಕಾಶ್ ಆಸ್ಪತ್ರೆಯಲ್ಲಿ ಹಮಿಕೊಳ್ಳಲಾಗಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button