ಬಾಗಲಕೋಟೆ

ಬಾಗಲಕೋಟೆಯಲ್ಲಿ ಪ್ರವಾಸಿ ತಾಣಗಳು ತೆರೆದಿದ್ದರೂ ಪ್ರವಾಸಿಗರ ಸಂಖ್ಯೆ ಇಳಿಕೆ

ಬಾಗಲಕೋಟೆ: ಐತಿಹಾಸಿಕ ತಾಣಗಳು ಬಾಗಲಕೋಟೆ ಜಿಲ್ಲೆಯಲ್ಲಿ ಓಪನ್ ಆಗಿದ್ದರೂ ಪ್ರವಾಸಿಗರು ಬಾರದೇ ಬಿಕೋ ಎನ್ನುವಂತಾಗಿದೆ.

ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು ನೋಡಲು ದೇಶದ ವಿದೇಶದಿಂದ ಪ್ರವಾಸಿಗರು ಬರುತ್ತಿದ್ದರು. ಕಳೆದ ಎರಡು ಕೋವಿಡ್ ಅಲೆಯಿಂದಾಗಿ ಪ್ರವಾಸೋದ್ಯಮ ನೆಲಕಚ್ಚಿದೆ. ಎರಡು ಲಾಕ್ ಡೌನ್ ಆಗಿದ್ದ ವೇಳೆ ಸಂಪೂರ್ಣವಾಗಿ ಪ್ರವಾಸೋದ್ಯಮ ಬಂದ್ ಆಗಿತ್ತು.ಈಗ ಎರಡನೇ ಅಲೆ ತಗ್ಗಿದ ಬಳಿಕ ಅನ್ ಲಾಕ್ ಆಗಿದೆ.ಆದೆರೆ ಪ್ರವಾಸಿ ತಾಣ ನೋಡಲು ಮಾತ್ರ ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ.

ಕೋವಿಡ್ ಮೊದಲು ನಿತ್ಯ ಬಾದಾಮಿಗೆ ಅಂದಾಜು ಎರಡು ಸಾವಿರ ಪ್ರವಾಸಿಗರು ಬರುತ್ತಿದ್ದರು. ಇದೀಗ 100ಜನ ಪ್ರವಾಸಿಗರು ಬರುತ್ತಿದ್ದು, ಯಾಕೋ ಪ್ರವಾಸಿಗರು ಹಿಂದೇಟು ಹಾಕುತ್ತಿದ್ದು, ಇನ್ನೂ ಪ್ರವಾಸಿಗರಲ್ಲಿ ಕೊರೊನಾ ಭಯವಿದ್ಯಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಬಾದಾಮಿ , ಪಟ್ಟದಕಲ್ಲು, ಐಹೊಳೆ ಸ್ಮಾರಕಗಳು ಪ್ರವಾಸಿಗರ ನೆಚ್ಚಿನ ತಾಣ.ಶಿಲ್ಪಕಲೆ ತೊಟ್ಟಿಲು ಎಂದು ಕರೆಯಲಾಗುತ್ತದೆ. ಇದೀಗ ಕೊರೊನಾ ಹೊಡೆತದಿಂದ ಪ್ರವಾಸೋದ್ಯಮ ಸಂಪೂರ್ಣ ಹೊಡೆತ ಬಿದ್ದಿದೆ. ಪ್ರವಾಸೋದ್ಯಮ ನೆಚ್ಚಿಕೊಂಡಿದ್ದ ಹೊಟೇಲ್ ,ಸಣ್ಣ ಪುಟ್ಟ ವ್ಯಾಪಾರಸ್ಥರು, ಪ್ರವಾಸಿ ಗೈಡ್ ಗಳ ಜೀವನ ಸಂಕಷ್ಟಕ್ಕೆ ಸಿಲುಕಿದೆ.ಪ್ರವಾಸಿ ತಾಣ ಓಪನ್ ಯಾದ್ರೆ ಬದುಕು ಸುಧಾರಣೆ ಆಗುತ್ತೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.

ಪ್ರವಾಸಿ ತಾಣದಲ್ಲಿ ಕೋವಿ ಡ್ ಸುರಕ್ಷಿತ ಕ್ರಮ ಕೈಗೊಳ್ಳಲಾಗಿದೆ. ಸ್ಯಾನಿಟೈಜರ್,ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯೊಂದಿಗೆ ಪ್ರವಾಸಿಗರು ಬಾದಾಮಿ ಗುಹಾಂತರ ದೇಗುಲ, ಪಟ್ಟದಕಲ್ಲು,ಐಹೊಳೆ ಸ್ಮಾರಕ ವೀಕ್ಷಣೆ ಮಾಡಬಹುದು. ಪ್ರವಾಸೋದ್ಯಮ ಚೇತರಿಕೆಗೊಳ್ಳಲು ಪ್ರವಾಸಿಗರು ಕೈ ಜೋಡಿಸಬೇಕಿದೆ. ಪ್ರವಾಸಿ ತಾಣ ನೋಡಲು ಪ್ರವಾಸಿಗರು ಬರಬೇಕು,ಕೋವಿ ಡ್ ನಿಯಮಾವಳಿ ಪಾಲನೆ ಯೊಂದಿಗೆ ವೀಕ್ಷಿಸಿ ಎಂದು ಸ್ಥಳೀಯರಾದ ಇಷ್ಟಲಿಂಗ ನರೇಗಲ್ ಕೇಳಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ, ಕೋವಿ ಡ್ ಎರಡನೇ ಅನ್ ಲಾಕ್ ಆಗಿದ್ದರೂ ಪ್ರವಾಸಿ ತಾಣಗಳತ್ತ ಬರುತ್ತಿಲ್ಲ. ಕೋವಿ ಡ್ ಮೂರನೇ ಅಲೆ ಭೀತಿಯ‌ ಮಧ್ಯೆಯೂ ಪ್ರವಾಸಿ ತಾಣಗಳು ಬಾಗಿಲು ತೆರೆದಿದೆ. ಇನ್ಮೇಲಾದರೂ ಪ್ರವಾಸಿಗರು ಕೋವಿಡ್ ಭಯ ಬಿಟ್ಟು ಪ್ರವಾಸಿ ತಾಣಗಳು ನೋಡಲು ಬರಬೇಕಿದೆ

Spread the love

Related Articles

Leave a Reply

Your email address will not be published. Required fields are marked *

Back to top button