ಬಾಗಲಕೋಟೆ

ನೇಕಾರರ ಬೇಡಿಕೆಗೆ ಸ್ಪಂದಿಸದಿದ್ದಕ್ಕೆ ಆಕ್ರೋಶ; ಬಾಗಲಕೋಟೆಯಲ್ಲಿ ಪ್ರತಿಭಟನೆ

ಬಾಗಲಕೋಟೆ: ರಾಜ್ಯದಲ್ಲಿರುವ 60ರಿಂದ 66 ಲಕ್ಷ ವೃತ್ತಿಪರ ನೇಕಾರರಿಗೆ ಅನ್ಯಾಯ ಹಾಗೂ ಕೋವಿಡ್ ಸಂಕಷ್ಟ ವಿವಿಧ ಕಾರಣಗಳಿಂದ 25ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಸ್ಪಂದಿಸದ ಜವಳಿ ಸಚಿವ ರಾಜಿನಾಮೆಗೆ ಆಗ್ರಹಿಸಿ ಬಾಗಲಕೋಟೆಯಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದಿಂದ ಪ್ರತಿಭಟನೆ ಮಾಡಿದರು.

ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಪ್ರತಿಭಟಿಸಿದ ನೇಕಾರ ಸೇವಾ ಸಂಘದ ಸದಸ್ಯರು.ನೇಕಾರರು ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ವಾಗಿ ಹಿಂದುಳಿದಿದ್ದು, ಕೇಂದ್ರ ,ರಾಜ್ಯದ ಇಲಾಖೆ ಸಮರ್ಪಕವಾಗಿ ಸೌಲಭ್ಯ ಪಡೆದುಕೊಳ್ಳಲಾಗದೇ 5ರಿಂದ 6ಲಕ್ಷ ನೇಕಾರರು ಕೂಲಿಯನ್ನು ನಂಬಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ.ಇವರಿಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ, 10ವರ್ಷಗಳಿಂದ ಬರಗಾಲ, ಅತಿವೃಷ್ಟಿ ಅನಾವೃಷ್ಟಿ ನೋಟ್ ಅಮಾನ್ಯೀಕರಣ,ಜಿಎಸ್ ಟಿ , ಮಾರುಕಟ್ಟೆ ಕುಸಿತ, ಕೋವಿಡ್ ಲಾಕ್ ಡೌನ್ ದಿಂದಾಗಿ ಸಮಸ್ಯೆಗೆ ಮಾರುಕಟ್ಟೆ ಮುಚ್ಚಿಹೋಗಿದ್ದು, ಯಾವುದೇ ಸಭೆ ಸಮಾರಂಭಗಳಿಲ್ಲ. ಸಾಮಾನ್ಯ ನೇಕಾರರು ಬದುಕು ಸಂಪೂರ್ಣ ಹೀನಾಯವಾಗಿದೆ.ರಾಷ್ಟ್ರೀಕೃತ,ಸಹಕಾರಿ ಬ್ಯಾಂಕ್ ಇತರೆ ಬ್ಯಾಂಕ್ ನಲ್ಲಿ ವಾರದ ಬಡ್ಡಿ ಸಾಲದ ಸುಳಿಗೆ ನೇಕಾರರು ಸಿಲುಕಿದ್ದಾರೆ.ಸಾಲ ತೀರಿಸಲಾಗದೆ ರಾಜ್ಯದಲ್ಲಿ 25ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜವಳಿ ಸಚಿವರು, ಉಸ್ತುವಾರಿ ಸಚಿವರು ಮೃತ ನೇಕಾರ ಮನೆಗೆ ಭೇಟಿ ನೀಡಿ 10ಲಕ್ಷ ಪರಿಹಾರ ಕೊಡಬೇಕು. ಆದರೆ ಆಡಳಿತ, ವಿರೋಧ ಪಕ್ಷದವರು ಸ್ಪಂದಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ನೆರೆಯ ಆಂಧ್ರ, ತಮಿಳುನಾಡು, ತೆಲಂಗಾಣ,ಕೇರಳ ರಾಜ್ಯದಲ್ಲಿ ನೇಕಾರರಿಗೆ ವಾರ್ಷಿಕ ಪ್ರೋತ್ಸಾಹ ಧನ 24ಸಾವಿರ ಕೊಡುತ್ತಾರೆ.ಅದೇ ಮಾದರಿಯಲ್ಲಿ ಕರ್ನಾಟಕದ ವೃತ್ತಿಪರ ನೇಕಾರರನ್ನು ದತ್ತು ಪಡೆಯಬೇಕು,ಇನ್ನು ಹಕ್ಕೊತ್ತಾಯಕ್ಕಾಗಿ 425.30ಕೋಟಿಪ್ರಸ್ತಾವಣೆ ಜಾರಿಯಾಗಬೇಕು,ವಿದ್ಯುತ್ ಮೀಟರ್ ಮಿನಿಮಮ್ ಚಾರ್ಜ್ ಕಡಿಮೆ ಮಾಡಬೇಕು,ಕಲ್ಯಾಣ ನಿಧಿ ಸ್ಥಾಪನೆ ಮಾಡಬೇಕು,ರೈತರಂತೆ ನಮಗೂ ಸೌಲಭ್ಯ ನೀಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟರಕಿ ಆಗ್ರಹಿಸಿದರು. ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button