ಬಾದಾಮಿ ಬನಶಂಕರಿ, ಕೂಡಲಸಂಗಮ, ತುಳಸಿಗೇರಿ ಆಂಜನೇಯ ದೇಗುಲಗಳು ಓಪನ್; ದರ್ಶನ ಪಡೆದ ಭಕ್ತರು

ಬಾಗಲಕೋಟೆ: ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ಬಾಗಿಲು ಬಂದ್ ಆಗಿದ್ದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿ, ಕೂಡಲಸಂಗಮದ ಸಂಗಮನಾಥ, ತುಳಸಿಗೇರಿ ಆಂಜನೇಯ ದೇಗುಲ ಸೇರಿದಂತೆ ದೇಗುಲಗಳಿಗೆ ಭಕ್ತರು ಭೇಟಿ ನೀಡಿ ದರ್ಶನ ಪಡೆದರು.
ನಾಡಿನ ಶಕ್ತಿ ಪೀಠಗಳಲ್ಲೊಂದಾಗಿರೋ ಬಾದಾಮಿ ಬನಶಂಕರಿ ದೇವಸ್ಥಾನದಲ್ಲಿ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು, ದೇಗುಲ ದರ್ಶನ ಪಡೆಯುವ ಭಕ್ತರಿಗೆ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಜರ್ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಅನ್ ಲಾಕ್ ಮಾರ್ಗಸೂಚಿ ಪ್ರಕಾರ ಭಕ್ತರಿಗೆ ದರ್ಶನ ಸಿಗುತ್ತಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿ ದೇಗುಲ ಸೇರಿದಂತೆ ನಾಡಿನ ದೇವಸ್ಥಾನ ತೆರೆಯಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಅದರ ಬೆನ್ನಲ್ಲೇ ನಾಡಿನ ಶಕ್ತಿಪೀಠಗಳಲ್ಲಿ ಒಂದಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿ ದೇವಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಮುಖ ದೇಗುಲಗಳು ಓಪನ್ ಆಗಿವೆ. ಮಾಸ್ಕ್ ಧರಿಸಿದವರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಇನ್ನು ದೇವಸ್ಥಾನದ ಎರಡು ಬದಿಗೆ ಒಂದೊಂದು ಸ್ಯಾನಿಟೈಸರ್ ಮಷಿನ್ ಅಳವಡಿಸಲಾಗಿದೆ.




