Breaking Newsಜಿಲ್ಲಾ ಸುದ್ದಿಬಾಗಲಕೋಟೆ

ಭಾಗಲಕೋಟೆ: ನದಿಯಲ್ಲಿ‌ ಮುಳುಗಿ ಒಂದೇ ಕುಟುಂಬದ ಮೂವರ ಸಾವು

ಬಾಗಲಕೋಟೆ : ದೇವರ ದರ್ಶನಕ್ಕೆ ಬಂದು ನದಿಯಲ್ಲಿ‌ ಮುಳುಗಿ ಒಂದೇ ಕುಟುಂಬದ ಮೂವರ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗ ಮಂದಿರದಲ್ಲಿ ನಡೆದಿದೆ.

ಮೃತರನ್ನು ವಿಶ್ವನಾಥ್ ಮಾವಿನ ಮರದ್ (40), ಪತ್ನಿ ಶ್ರಿದೇವಿ ಮಾವಿನಮರದ್ (32) ಹಾಗೂ ಮಗಳು ನಂದಿನಿ ಮಾವಿನಮರದ್ (12) ಎಂದು ಗುರುತಿಸಲಾಗಿದೆ. ಇವರು ಮೂಲತಃ ಗುಳೇದಗುಡ್ಡ ತಾಲೂಕಿನ ಕೊಟೇಕಲ್ ಗ್ರಾಮದವರಾಗಿದ್ದು, ಗದಗ್ ಜಿಲ್ಲೆಯ ರೋಣದಲ್ಲಿ ವಾಸವಾಗಿದ್ದರು.

ಬಾದಾಮಿಯ ಬನಶಂಕರಿ ದೇವಿ ದೇವಸ್ಥಾನಕ್ಕೆ ತೆರಳಿ ದೇವಿ ದರ್ಶನ ಪಡೆದಿದ್ದರು. ನಂತರ ಬಾದಾಮಿ ತಾಲೂಕಿನ ಶಿವಯೋಗಮಂದಿರಕ್ಕೆ ತೆರಳಿದರು. ಉಪಹಾರ ಸೇವಿಸಲು ಶಿವಯೋಗಮಂದರ ಮಲಪ್ರಭಾ ನದಿ ದಡದಲ್ಲಿ ಕೂತಿದರು.

ಊಟ ಮಾಡಿ ನಂದಿನಿ ಮಾವಿನಮರದ್ ನದಿಯಲ್ಲಿ ಕೈ ತೊಳೆಯಲು ಹೋಗಿ, ಜಾರಿ ನದಿಗೆ ಬಿದ್ದಿದ್ದಾರೆ. ಅವರನ್ನ ರಕ್ಷಿಸಲು ಪತಿ ವಿಶ್ವನಾಥ್, ಶ್ರೀದೇವಿ ನದಿಗೆ ಹಾರಿದ್ದಾರೆ.
ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಹುಡುಕಾಟ ನಡೆಸಿ ಶ್ರಿದೇವಿ ಮಾವಿನಮರದ್ ಅವರ ಶವ ಹೊರಕ್ಕೆ ತೆಗೆಯಲಾಗಿದ್ದು, ಆದರೆ ವಿಶ್ವನಾಥ್ ಹಾಗೂ‌ ಮಗಳು ನಂದಿನಿ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಸ್ಥಳಕ್ಕೆ ಬಾದಾಮಿ ಪಿ.ಎಸ್.ಐ ಭೇಟಿ‌ ಪರಿಶೀಲನೆ ನಡೆಸುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button