ಪಕ್ಷ ವಿರೋಧಿ ಚಟುವಟಿಕೆ ಮಾಡಿರುವವರ ವಿರುದ್ದ ರಾಜ್ಯ ನಾಯಕರಿಂದ ಕ್ರಮ: ಸಾರಾ ಮಹೇಶ್

ಮೈಸೂರು : ಪಕ್ಷ ವಿರೋಧಿ ಚಟುವಟಿಕೆ ಮಾಡಿರುವವರ ವಿರುದ್ಧ ರಾಜ್ಯ ನಾಯಕರು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದ್ದಾರೆ ಎಂದು ಶಾಸಕ ಸಾ ರಾ ಮಹೇಶ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ನಗರ ಸಭೆ, ಜಿಲ್ಲಾ ಪಂಚಾಯತ್‌ನಲ್ಲಿ ನಮ್ಮ ಪಕ್ಷದ ಪರವಾಗಿ ಕೆಲಸ ಮಾಡಿಲ್ಲ ಎನ್ನುವುದು ಅಲ್ಲ. ನಮ್ಮ ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ. ಈ ಬಗ್ಗೆ ನಾಯಕರು ಸದ್ಯದಲ್ಲೇ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.
ಪಕ್ಷದ ಅಭ್ಯರ್ಥಿ ವರಿಷ್ಠರಾದ ಹೆಚ್.ಡಿ.ದೇವೇಗೌಡರು, ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲು ಹೋಗುತ್ತಾರೆ. ಈ ವೇಳೆ ಪರಿಷತ್ ಚುನಾವಣೆ ಸಂದರ್ಭದಲ್ಲಿ ಆಗಿರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ವರದಿ ನೀಡುತ್ತಾರೆ ಎಂದರು.
ವೈಯಕ್ತಿಕವಾಗಿ ಜಿ.ಟಿ.ದೇವೇಗೌಡರನ್ನು ಎಂಬ ಪ್ರಶ್ನೆಗೆ ಉತ್ತರಿಸಿದ ಸಾ.ರಾ.ಮಹೇಶ್, ನಮ್ಮ ನಾಯಕರು ಎಂದು ಒಪ್ಪಿಕೊಂಡಿದ್ದೆವು. ಹಾಗಾಗಿ, ಇನ್ನಾದರೂ ಬದಲಾಗುತ್ತಾರೆ ಎಂದು ಹೇಳುತ್ತಿದ್ದೇನೆ. ಸಿ.ಎನ್.ಮಂಜೇಗೌಡ ಅವರು ಕಾಂಗ್ರೆಸ್‌ನಲ್ಲಿ ಸೀಟ್ ಕೇಳಿದ್ದರು, ಅವರ ಮನಸ್ಸು ಬದಲಾಯಿಸಿ ಜೆಡಿಎಸ್‌ನಲ್ಲಿ ಕೇಳಿದರು, ಬೇರೆ ಯಾರಿಗೆ ಕೊಟ್ಟರು ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕೊನೆಯಲ್ಲಿ ನಮ್ಮೆಲ್ಲಾ ಆಕಾಂಕ್ಷಿಗಳು ಸೇರಿ ತೀರ್ಮಾನ ಮಾಡಿ ಮಂಜೇಗೌಡರು ಸೂಕ್ತ ಅಭ್ಯರ್ಥಿ ಎಂದು ತೀರ್ಮಾನ ಮಾಡಿದರು. 15 ದಿನದಲ್ಲಿ ಕೆಲಸ ಮಾಡಿ ಎಲ್ಲರೂ ಶಿಸ್ತಿನ ಸಿಪಾಯಿಯಂತೆ ಗೆಲ್ಲಿಸಿಕೊಟ್ಟಿದ್ದಾರೆ. ಈ ತರಹ ಅವರ ಮನಸ್ಸು ಬದಲಾವಣೆ ಆಗಬಹುದು ಎಂದು ಕಾದು ನೋಡುತ್ತಿದ್ದೇವೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷ ನಮಗೆ ಮುಖ್ಯವೇ ಹೊರತು, ನಾವು ಪಕ್ಷಕ್ಕೆ ಮುಖ್ಯವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದ ಸಾ.ರಾ.ಮಹೇಶ್, ಅರಿಶಿಣ, ಕುಂಕುಮ, ಕವರ್ ಕೊಟ್ಟಿದ್ದಾರೆ. ಆಣೆ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ರಾಷ್ಟ್ರೀಯ ಪಕ್ಷದವರು ಏನೇ ಕಷ್ಟಪಟ್ಟರು ಬಿಜೆಪಿ 11 ಕ್ಷೇತ್ರ ಹಾಗೂ ಕಾಂಗ್ರೆಸ್ 11 ಕ್ಷೇತ್ರ ಗೆದ್ದಿವೆ. ಜೆಡಿಎಸ್ 6 ಅಭ್ಯರ್ಥಿಗಳನ್ನು ಹಾಕಿ 2 ಕ್ಷೇತ್ರ ಗೆದ್ದಿದೆ. ಬಹುಮತಕ್ಕೆ ನಾವು ಯಾರಿಗೆ ಸಪೋರ್ಟ್ ಮಾಡುತ್ತೇವೆ ಅವರಿಗೆ ತಾನೇ ಅಂತೆಯೇ ಮುಂದಿನ 2023ನೇ ಚುನಾವಣೆಯಲ್ಲೂ ಇದೇ ರಿಸಲ್ಟ್‌ನಲ್ಲಿ ಫಲಿತಾಂಶ ಇರಲಿದೆ ಎಂದರು.
ಹೆಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಅವರು ಚರ್ಚೆ ಮಾಡಿ 2023ರ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಂದ ಅಂತರ ಕಾಯ್ದುಕೊಳ್ಳಬೇಕಾ ಅಥವಾ ಯಾರ ಜೊತೆ ಸಖ್ಯವನ್ನು ಬೆಳೆಸಬೇಕು ಎಂದು ನಿರ್ದಿಷ್ಟವಾಗಿ ತೀರ್ಮಾನ ಮಾಡುತ್ತಾರೆ. ವೈಯಕ್ತಿಕವಾಗಿ ಎರಡು ರಾಷ್ಟ್ರೀಯ ಪಕ್ಷಗಳು ಕೂಡ ನಮ್ಮ ಜೊತೆ ಚೆನ್ನಾಗಿ ಇದ್ದುಕೊಂಡು, ನಮ್ಮನ್ನು ಮುಗಿಸುವ ಪ್ರಯತ್ನ ಮಾಡುತ್ತಾರೆ. ಇಬ್ಬರಿಂದಲೂ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು ಎಂದು ಸಾರಾ,ಮಹೇಶ್ ಹೇಳಿದರು.




