ಜಿಲ್ಲಾ ಸುದ್ದಿದಕ್ಷಿಣ ಕನ್ನಡ
ಗಣಪತಿ ಕಟ್ಟೆಗೆ ಹಾನಿಗೊಳಿಸಿದ ಆರೋಪಿಯ ಸೆರೆ

ಮಂಗಳೂರು: ಗಣಪತಿ ಕಟ್ಟೆಗೆ ಕಲ್ಲು ಎತ್ತಿಹಾಕಿ ಹಾನಿಗೊಳಿಸಿರುವ ಕಿಡಿಗೇಡಿ ಕೃತ್ಯವೊಂದು ನೆಲ್ಯಾಡಿ ಸಮೀಪದ ಉದನೆ ಎಂಬಲ್ಲಿ ನಡೆದಿದ್ದು, ಆರೋಪಿಯನ್ನು 24 ಗಂಟೆಯೊಳಗೆ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ರವೀಂದ್ರ ಕುಮಾರ್ (25) ಈ ಕೃತ್ಯವೆಸಗಿದ್ದಾನೆ. ಗ್ರಾಮದಲ್ಲಿ ಗಣೇಶೋತ್ಸವ ಸಮಿತಿಯಿಂದ ಗಣಪತಿ ಕಟ್ಟೆಯಲ್ಲಿ ಸರಳವಾಗಿ ಗಣೇಶೋತ್ಸವದ ಆಚರಣೆ ನಡೆಯುತ್ತಿತ್ತು. ಪೂಜೆವೇಳೆ ಮೆಟ್ಟಿಲಿನ ಬಳಿ ಬಾಳೆಗಿಡಗಳನ್ನು ಇಡಲಾಗಿತ್ತು. ರಾತ್ರಿವೇಳೆ ಆರೋಪಿಯು ಬಾಳೆಗಿಡಗಳನ್ನು ಕಿತ್ತೆಸೆದು ಕಟ್ಟೆಮೇಲೆ ಕಲ್ಲುಎತ್ತಿಹಾಕಿ ಮೆಟ್ಟಿಲನ್ನು ಹಾನಿಗೊಳಿಸಿದ್ದಾನೆ ಎನ್ನಲಾಗಿದೆ.
ಆರೋಪಿಗೆ ನ್ಯಾಯಾಂಗ ಬಂಧನ ಒಪ್ಪಿಸಲಾಗಿದ್ದು, ಈತನ ಉದ್ದೇಶ ಏನಿದ್ದರಬಹುದು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




