Breaking NewsLatestಮೆಟ್ರೋ
108 ಆರೋಗ್ಯ ಕವಚ ತುರ್ತು ವೈದ್ಯಕೀಯ ಸೇವೆಗೆ ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದಲ್ಲಿ ಇಂದು 108 ಆರೋಗ್ಯ ಕವಚ ತುರ್ತು ವೈದ್ಯಕೀಯ ಸೇವೆಗೆ ನೂತನವಾಗಿ 120 ಆಂಬ್ಯುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಕೊರೊನಾ ನಮ್ಮ ಕಣ್ಣು ತೆರೆಸಿದೆ. ಕೊರೊನಾ ಬಳಿಕ ಆರೋಗ್ಯ ಎಷ್ಟು ಮುಖ್ಯ ಎಂದು ಗೊತ್ತಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ವ್ಯವಸ್ಥೆ ಸಮಸ್ಯೆ ಇದೆ. ಕೊರೊನಾ ಮೊದಲನೇ ಹಾಗೂ ಎರಡನೇ ಅಲೆ ಎದುರಿಸಿದ್ದೇವೆ. ಮೊದಲನೇ ಅಲೆಯಲ್ಲಿ ಯಾವ ರೀತಿ ಇತ್ತು ಎಂದು ಗೊತ್ತಿದೆ. ಆಗ ಸೋಂಕಿತರನ್ನು ರಿಜಿಸ್ಟರ್ ಮಾಡೋದು ಗೊತ್ತಿರಲಿಲ್ಲ. ಆದರೆ ನಮ್ಮ ಆರೋಗ್ಯ ಸಿಬ್ಬಂದಿ ಹಗಲಿರುಳು ಶ್ರಮಿಸಿದ್ದಾರೆ. ನನ್ನ ಪ್ರಕಾರ 108 ಌಂಬುಲೆನ್ಸ್ ಇನ್ನೂ ಸುಧಾರಿಸಬೇಕಿದೆ. ಜಿಪಿಎಸ್, ಎಲ್ಲ ಪ್ರದೇಶಗಳೂ ಸಂಪರ್ಕಿಸುವಂತಾಗಬೇಕು ಎಂದರು.
ಸಚಿವರಾದ ಡಾ: ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಬಿ.ಎ.ಬಸವರಾಜ,ಬಿ.ಶ್ರೀರಾಮುಲು, ಮುನಿರತ್ನ, ಬಿ.ಡಿ.ಎ.ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಸಂಸದ ಪಿ.ಸಿ.ಮೋಹನ್ ಮತ್ತಿತರರು ಉಪಸ್ಥಿತರಿದ್ದರು.
