ಉತ್ತರ ಕನ್ನಡಜಿಲ್ಲಾ ಸುದ್ದಿ
ನದಿಯಲ್ಲಿ ಬಿದ್ದು ಯುವಕ ಸಾವು : ಬಡಗಣಿ ನದಿಯಲ್ಲಿ ದುರ್ಘಟನೆ

ಕಾರವಾರ : ಕುಮಟಾ ತಾಲೂಕಿನ ಬಡಗಣಿ ನದಿಯಲ್ಲಿ ಬಿದ್ದು ಯುವಕನೊಬ್ಬ ಮೃತಪಟ್ಟ ದುರ್ಘಟನೆ ಇಂದು ನಡೆದಿದೆ. ತಾಲೂಕಿನ ಊರಕೇರಿ ಗ್ರಾಮದ ಹರಿಜನಕೇರಿ ನಿವಾಸಿ ಮಂಜುನಾಥ ಮಾಳು ಮುಕ್ರಿ ಮೃತಪಟ್ಟ ಯುವಕನೆಂದು ಗುರುತಿಸಲಾಗಿದೆ.
ಮನೆಯ ಸಾಮಗ್ರಿಗಳನ್ನು ಖರೀದಿಸಿ ಮರಳುವಾಗ ಬಡಗಣಿ ನದಿಯಲ್ಲಿ ಹಾಕಲಾದ ಕಾಲು ಸಂಕ ದಾಟುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲುಜಾರಿ ನದಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಹಾಗೂ ಕುಮಟಾ ಪೊಲೀಸರು ಸ್ಥಳಕ್ಕಾಗಮಿಸಿ ಮಂಜುನಾಥ ಮುಕ್ರಿ ಅವರ ಮೃತದೇಹವನ್ನು ಹೊರತೆಗೆದು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




