ಸಿಸಿಬಿ ಪೊಲೀಸರ ಭರ್ಜರಿ ಭೇಟೆ: ಮನೆಯಲ್ಲಿ ಹೈಡ್ರೋ ಗಾಂಜಾ ಬೆಳೆದ ವಿದೇಶಿ ವ್ಯಕ್ತಿ ಬಂಧನ

ರಾಮನಗರ: ಸಿಸಿಬಿ ಪೊಲೀಸರು ಭರ್ಜರಿ ಭೇಟೆಯಾಡಿದ್ದು, ವಾಸವಿದ್ದ ಮನೆಯಲ್ಲಿ ಹೈಡ್ರೋ ಗಾಂಜಾ ಬೆಳೆದ ವಿದೇಶಿ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಇರಾನಿ ಮೂಲದ ಗಾಂಜಾ ಬೆಳೆಗಾರ ಅಂದರ್ ಆಗಿದ್ದು, ಇಲ್ಲಿನ ಬಿಡದಿ ಈಗಲ್ ಟನ್ ರೆಸಾರ್ಟ್ ನಲ್ಲಿನ ವಿಲ್ಲ ದಲ್ಲಿ ಬೆಳೆದಿದ್ದ ಹೈಡ್ರೋ ಗಾಂಜಾ ವಶಪಡಿಸಿಕೊಂಡ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಾವಿದ್ ರುಸ್ತಂ ಪುರಿ (36) ವರ್ಷದ ಇರಾನಿ ಮೂಲದ ವ್ಯಕ್ತಿಯಾಗಿದ್ದು, ಈತನನ್ನು ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ಬಂಧಿಸಿದ್ದಾರೆ.
ಸುಮಾರು 150ಕ್ಕೂ ಹೆಚ್ಚು ಹೈಡ್ರೋ ಗಾಂಜಾ ಗಿಡಗಳು ಸಿಸಿಬಿ ಪೊಲೀಸರ ವಶಕ್ಕೆ ಪಡೆದಿದ್ದು, ಆರೋಪಿ ಒಂದೂವರೆ ವರ್ಷದಿಂದ ಈಗಲ್ ಟನ್ ವಿಲ್ಲ ದೆಲ್ಲೆ ಬೆಳೆಯುತ್ತಿದ್ದ ಎನ್ನಲಾಗಿದೆ.
ಮನೆಯ ಟೆರೇಸ್ ಹಾಗೂ ರೂಮ್ ನಲ್ಲಿ ಹೈಡ್ರೋ ಗಾಂಜಾ ಗಿಡಗಳು ಹಾಗೂ ಕೆಮಿಕಲ್ ಗಳು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆನ್ಲೈನ ಮುಖಾಂತರ ಸೀಡ್ಸ್ ತರಿಸಿ ಇಲ್ಲಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಎನ್ನಲಾಗಿದ್ದು, ಹೈಡ್ರೋ ಗಾಂಜಾದ ಬೆಲೆ ಮೂರು ಕೊಟಿಗೂ ಅಧಿಕ ಮೌಲ್ಯದ್ದು ಎಂದು ಹೇಳಲಾಗುತ್ತಿದೆ




