ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಧಾರವಾಡ: ಸಾಲ ಬಾಧೆ ತಾಳಲಾರದೆ ನೇಣು ಹಾಕಿಕೊಂಡು ರೈತ ಆತ್ಮಹತ್ಯೆ

ಧಾರವಾಡ: ಸಾಲ ಬಾಧೆ ತಾಳಲಾರದೆ ರೈತನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ವಾರ್ಡ ನಂಬರ್ 12 ರಲ್ಲಿ ನಡೆದಿದೆ.‌

ಗ್ರಾಮದ 12 ನೇ ವಾರ್ಡಿನ್ ನಿವಾಸಿ ಈರಪ್ಪ ಬಸಪ್ಪ ಸಾದರ ಮೃತ ರೈತನಾಗಿದ್ದಾನೆ. ಇಂದು ಮುಂಜಾನೆ ಈರಪ್ಪ ಪ್ರತಿದಿನದಂತೆ ಬೆಳಗು ಮುಂಜಾನೆ ಎದ್ದು ಹಸುಗಳ ಕೊಟ್ಟಿಗೆ ಸ್ವಚ್ಚ ಮಾಡಿದ್ದಾನೆ. ಬಳಿಕ ಅದೇ ಹಸುಗಳನ್ನು ಹೊರಗಡೆ ಕಟ್ಟಿ ಬಂದ ಈರಪ್ಪ, ಹಸುವಿನ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡು‌‌ ಆತ್ಮಹತ್ಯೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.‌

ತುಂಬಾ ಸಮಯದಿಂದ ದನದ ಕೊಟ್ಟಿಗೆಯ ಬಾಗಲು ಬಂದಿರುವುದನ್ನು ಗಮನಿಸಿದ ಕುಟುಂಬಸ್ಥರು ಕೊಟ್ಟಿಗೆಯ ಒಳಗೆ ಹೋಗಿ ನೋಡಿದಾಗ, ಈರಪ್ಪ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.‌ ಕುಟುಂಬಸ್ಥರ ಚೀರಾಟ ಕೂಗಾಟ ಕೇಳಿದ ಕೂಡಲೇ ಅಕ್ಕಪಕ್ಕದವರು ಸ್ಥಳಕ್ಕೆ ಬಂದು ಗಮನಿಸಿ, ನಂತರ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಕುರಿತು ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button