ಜಿಲ್ಲಾ ಸುದ್ದಿದಾವಣಗೆರೆ

ನ್ಯಾಮತಿಯಲ್ಲಿ “ಆಪರೇಷನ್ ಹೆಬ್ಬಾವು” ಹೆಂಗಿತ್ತು ಗೊತ್ತಾ…?

ದಾವಣಗೆರೆ: ಶುಂಠಿ ಹೊಲದಲ್ಲಿ ಆರಾಮಾಗಿ ಬಂದು‌ ಮಲಗಿತ್ತು. ಅದನ್ನು ನೋಡ್ತಿದ್ದಂತೆ ರೈತರು ಬೆಚ್ಚಿ ಬಿದ್ದಿದ್ದರು. ಒಮ್ಮೆಲೆ ಹೌಹಾರಿದ ಜನರು ಅರಣ್ಯ ಇಲಾಖೆಯ ಗಮನಕ್ಕೆ ತಂದರು.

ತಕ್ಷಣವೇ ಹಾವು ಹಿಡಿಯುವವರಿಗೆ ಮಾಹಿತಿ ನೀಡಲಾಯಿತು. ಬಳಿಕ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಅದನ್ನು ಹಿಡಿದು ತೆಗೆದುಕೊಂಡು ಹೋಗಲಾಯಿತು.

ಹೌದು. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಫಲವನಹಳ್ಳಿ ಗ್ರಾಮದ ಹೊಲದಲ್ಲಿ ನಡೆದ ಆಪರೇಷನ್ ಹೆಬ್ಬಾವು ಸ್ಯಾಂಪಲ್ ಇದು.

ಭಾರೀ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿತ್ತು. ರೈತರೊಬ್ಬರ ಹೊಲದಲ್ಲಿ ಇದ್ದ ಹೆಬ್ಬಾವು 8 ರಿಂದ 10 ಅಡಿ ಉದ್ದ ಹಾಗೂ 15ರಿಂದ 18 ಕೆಜಿ ತೂಕವಿತ್ತು. ಹೆಬ್ಬಾವು ನೋಡುತ್ತಿದ್ದಂತೆ ಶಿವಮೊಗ್ಗದ ಸ್ನೇಕ್ ಕಿರಣ್ ಅವರಿಗೆ ಈ ವಿಷಯ ತಿಳಿಸಲಾಯಿತು.

ಬಳಿಕ ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಾದ ಕೃಷ್ಣಮೂರ್ತಿ, ನಿಂಗರಾಜ ಹರವಿ, ಚಂದ್ರಪ್ಪ, ಬಸವರಾಜ್ ಅವರ ಸಹಕಾರದೊಂದಿಗೆ ಹೆಬ್ಬಾವು ಹಿಡಿದು ದೂರದ ಅರಣ್ಯಕ್ಕೆ ಬಿಟ್ಟು ಬರಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button