Breaking NewsLatestಮಹಿಳೆರಾಷ್ಟ್ರೀಯ

ಸಶಸ್ತ್ರ ಪಡೆಯಲ್ಲಿ ಮಹಿಳೆಯರಿಗೆ ಅವಕಾಶ; ಕೇಂದ್ರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಹರ್ಷ

ನವದೆಹಲಿ: ಐತಿಹಾಸಿಕ ನಡೆಯೊಂದರಲ್ಲಿ, ಭಾರತದ ಸಶಸ್ತ್ರ ಪಡೆಗಳಲ್ಲಿ ಶಾಶ್ವತ ಆಯೋಗಕ್ಕಾಗಿ ಮಹಿಳೆಯರನ್ನು ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ (ಎನ್​ಡಿಎ) ಸೇರಿಸಿಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ಹೇಳಿದೆ. ಆದಾಗ್ಯೂ, ಮಹಿಳೆಯರು ಎನ್‌ಡಿಎ ಕೋರ್ಸ್‌ಗಳನ್ನು ತೆಗೆದುಕೊಳ್ಳಲು ಅವಕಾಶವಾಗುವ ಮಾರ್ಗಸೂಚಿಗಳನ್ನು ರೂಪಿಸುವುದಕ್ಕೆ ಸ್ವಲ್ಪ ಸಮಯ ಬೇಕು ಎಂದಿದೆ.

ಇದರ ಬಗ್ಗೆ ಮಾಹಿತಿ ನೀಡಲು ಕೇಂದ್ರಕ್ಕೆ ಸೆಪ್ಟೆಂಬರ್ 20ರವರೆಗೆ ಸುಪ್ರೀಂ ಕೋರ್ಟ್ ಕಾಲಾವಕಾಶ ಕೊಟ್ಟಿದೆ.

ಮಹಿಳೆಯರನ್ನು ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಿಸಿಕೊಳ್ಳುವುದಕ್ಕೆ ಸಶಸ್ತ್ರ ಪಡೆಗಳು ತಾವಾಗಿಯೇ ನಿರ್ಧಾರ ತೆಗೆದುಕೊಂಡದ್ದಕ್ಕೆ ಹರ್ಷ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಸುಧಾರಣೆ ಒಂದೇ ದಿನದಲ್ಲಿ ಸಾಧ್ಯವಾಗುವುದಲ್ಲ ಎಂಬುದು ತಿಳಿದಿದೆ. ಸರ್ಕಾರ ಇದನ್ನು ಕಾರ್ಯರೂಪಕ್ಕೆ ತರಲು ಒಂದು ಗಡುವು ಹಾಕಿಕೊಳ್ಳಬೇಕು ಎಂದು ಸೂಚಿಸಿತು.

ಎನ್​ಡಿಎ ಪರೀಕ್ಷೆ ಬರೆಯಲು ಮಹಿಳೆಯರಿಗೆ ಅವಕಾಶ ಕೊಡಬೇಕೆಂದು ಕೋರಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್​ನ ದ್ವಿಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಸಶಸ್ತರ ಪಡೆ ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಸೇನೆಯೊಳಗೆ ಲಿಂಗ ಸಮಾನತೆ ತರಲು ಬಹಳಷ್ಟು ಕೆಲಸ ಮಾಡಬೇಕಾದ ಅಗತ್ಯವಿದೆ. ಈ ವಿಚಾರದಲ್ಲಿ ನ್ಯಾಯಾಲಯದ ಮಧ್ಯಪ್ರವೇಶಕ್ಕೆ ಕಾಯುವುದಕ್ಕಿಂತ ಸಶಸ್ತ್ರ ಪಡೆಗಳು ತಾವೇ ಪೂರ್ವಭಾವಿಯಾಗಿ ಕಾರ್ಯೋನ್ಮುಖವಾಗಬೇಕೆಂದು ಬಯಸುತ್ತಿರುವುದಾಗಿ ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್ ಮತ್ತು ಎಂಎಂ ಸುಂದ್ರೇಶ್ ಅವರನ್ನೊಳಗೊಂಡ ಪೀಠ ಹೇಳಿತು.

ಮಹಿಳೆಯರು ಎನ್​ಡಿಎ ಪರೀಕ್ಷೆ ಬರೆಯಬಹುದು ಎಂದು ಕಳೆದ ಆಗಸ್ಟ್​ನಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಅದೇಶ ಹೊರಡಿಸಿತ್ತು. ಅದಾದ ತಿಂಗಳೊಳಗೇ ಮತ್ತೆ ವಿಚಾರಣೆ ನಡೆದಿದೆ. ಎನ್​ಡಿಎ ಪರೀಕ್ಷೆ ನವೆಂಬರ್ 14ಕ್ಕೆ ಮರುನಿಗದಿಯಾಗಿದೆ.

ಆಗಸ್ಟ್ 18ರಂದು ನಡೆದಿದ್ದ ವಿಚಾರಣೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರಿಂ ಕೋರ್ಟ್, ದೇಶದ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಸಮಾನ ಸೇವಾ ಅವಕಾಶ ನೀಡದಿರುವುದು ಮನಸ್ಥಿತಿ ಸಮಸ್ಯೆ ಎಂದು ಕಟುವಾಗಿ ಹೇಳಿತ್ತು. ಧೋರಣೆ ಬದಲಿಸಿಕೊಳ್ಳುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು.

ಈ ವಿಚಾರದಲ್ಲಿ ನ್ಯಾಯಾಲಯವೇ ಆದೇಶ ನೀಡಬೇಕಾದ ಪ್ರಮೇಯ ತಂದಿಡುವ ಬದಲು, ಸೇನೆ ತಾನಾಗಿಯೇ ನಿರ್ಧಾರ ಕೈಗೊಳ್ಳಲಿ ಎಂದು ಕೂಡ ಅಂದಿನ ವಿಚಾರಣೆ ವೇಳೆ ಕೋರ್ಟ್ ಆಶಿಸಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button