Breaking NewsLatestಆಹಾರಲೈಫ್ ಸ್ಟೈಲ್
ಸಿಂಪಲ್ಲಾಗಿ ಗೋಧಿ ಹಿಟ್ಟಿನ ಹಲ್ವಾ: ರೆಡಿ ಮಾಡಿ ರುಚಿ ನೋಡಿ

ಸಾಮಾನ್ಯವಾಗಿ ಮನೆಯಲ್ಲಿ ಇದ್ದಾಗ ಏನಾದ್ರೂ ಸ್ವೀಟ್ ತಿನ್ನಬೇಕು ಅನ್ನಿಸುವುದು ಸಹಜ. ಆದರೆ ಸಿಂಪಲ್ಲಾಗಿ ಏನು ಮಾಡೋದು ಎಂಬ ಚಿಂತೆ ಕಾಡುತ್ತದೆ. ಹೀಗಿರುವಾಗ ಇಲ್ಲೊಂದು ಸಿಂಪಲ್ ರೆಸಿಪಿ ಇದೆ. ಅದೇ ಗೋಧಿ ಹಿಟ್ಟಿನ ಹಲ್ವಾ. ಒಮ್ಮೆ ಟ್ರೈ ಮಾಡಿ ನೋಡಿ
ಬೇಕಾಗುವ ಸಾಮಾಗ್ರಿಗಳು
ಸಕ್ಕರೆ- 1 ಕಪ್
ಗೋಧಿ-2 ಕಪ್
ತುಪ್ಪ-ಅರ್ಧ ಕಪ್
ದ್ರಾಕ್ಷಿ ಗೋಡಂಬಿ
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಸಕ್ಕರೆ, ಅಳತೆಗೆ ತಕ್ಕಂತೆ ನೀರು ಹಾಕಿ ಕುದಿಸಿಕೊಂಡು ಮಿಶ್ರಣವನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು. ನಂತರ ಬಾಣಲೆಗೆ ತುಪ್ಪ, ಗೋಧಿ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ತೆಗೆದಿಟ್ಟುಕೊಳ್ಳಬೇಕು. ಬಾಣಲೆಗೆ ಸಕ್ಕರೆ ನೀರಿನ ಮಿಶ್ರಣವನ್ನು ಸುರಿಯಿರಿ ಮತ್ತು ಚೆನ್ನಾಗಿ ಕಲಸಿ. ತದ ನಂತರ ಗೋಧಿ ಹಿಟ್ಟಿನ ಮಿಶ್ರಣವನ್ನು ಹಾಕಿ, ಹಲ್ವಾ ತಳ ಬಿಡುವ ತನಕ ಚೆನ್ನಾಗಿ ಬೇಯಿಸಿಕೊಳ್ಳಬೇಕು. ತುಪ್ಪ ಸವರಿದ ಬಟ್ಟಲಿಗೆ ಮಿಶ್ರಣವನ್ನು ಹಾಕಿ ಹರಡಲು ಬಿಡಬೇಕು. ಈಗ ರುಚಿಯಾದ ಹಲ್ವಾ ಸವಿಯಲು ಸಿದ್ಧವಾಗುತ್ತದೆ.
