Breaking NewsLatestಕ್ರೈಂಚರ್ಚೆಜಿಲ್ಲಾ ಸುದ್ದಿರಾಜ್ಯಸುದ್ದಿಹುಬ್ಬಳ್ಳಿ - ಧಾರವಾಡ

ಸಿಎಫ್ಐ ಸಂಘಟನೆಯ ರಾಜ್ಯಾಧ್ಯಕ್ಷನ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇವೆ: ಪ್ರಮೋದ ಮುತಾಲಿಕ್

ಧಾರವಾಡ: ಕಳೆದ ದಿನ ಹಿಜಾಬ್ ಕುರಿತು ಹೈಕೋರ್ಟ ತ್ರೀಸದಸ್ಯ ಪೀಠ ತೀರ್ಪು‌ ಪ್ರಕಟಿಸಿದ ಬೆನ್ನಲ್ಲೆ ಸಿಎಫ್ಐ ಸಂಘಟನೆಯ ರಾಜ್ಯಾಧ್ಯಕ್ಷ ಅತಾವುಲ್ಲಾ ಗುಂಜಲಕಟ್ಟಿ ನ್ಯಾಯಾಲಯದ ತೀರ್ಪಿನ‌ ವಿರುದ್ದ ಅಗೌರವವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಧಾರವಾಡದಲ್ಲಿ ಶ್ರೀರಾಮ‌ಸೇನೆ ಸಂಸ್ಥಾಪಕ ಪ್ರಮೋದ‌ ಮುತಾಲಿಕ್ ಹೇಳಿದರು.

ನಗರದಲ್ಲಿ ಹೈಕೋರ್ಟ್ ಎದುರುಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಗಲಾಟೆಯ ಕುರಿತಾಗಿ ಹೈಕೋರ್ಟ್ ಈಗಾಗಲೇ ತೀರ್ಪು‌ ಪ್ರಕಟಿಸಿದೆ. ಆದರೆ ತೀರ್ಪಿನ ವಿರುದ್ದ ಹಿಜಾಬ್ ಪರ ಕೋರ್ಟ್ ಮೊರೆ ಹೋಗಿದ್ದ ಆರು ವಿದ್ಯಾರ್ಥಿನಿಯರು ಹಾಗೂ ಸಿಎಫ್ಐನ ರಾಜ್ಯಾಧ್ಯಕ್ಷ ಅತಾವುಲ್ಲಾ ಗುಂಜಲಕಟ್ಟಿ ಅವರು ಅಗೌರವವಾಗಿ ಮಾತಾನಾಡಿದ್ದಾರೆ. ಈ ರೀತಿ ನಡೆ ಸರಿ ಇಲ್ಲ, ಸಿಎಫ್‌ಐ ಸಂಘಟನೆಯ ರಾಜ್ಯಾಧ್ಯಕ್ಷರ ವಿರುದ್ಧ ಪ್ರಕರಣ ದಾಖಲಿಸಲು ನಾವು ಮುಂದಾಗಿದ್ದೇವೆ ಎಂದರು.

ಅಡಿಷನಲ್ ಅಡ್ವೋಕೆಟ್ ಜನರಲ್ ಅನುಮತಿ ಪಡೆದು ನ್ಯಾಯಾಂಗ ನಿಂದನೆ ಪ್ರಕರಣ

ನ್ಯಾಯಾಲಯದ ತೀರ್ಪನ್ನ ಗೌರವಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿರುತ್ತದೆ. ಆದರೆ ಅತಾವುಲ್ಲಾ ಅವರು ಗೌರವಿಸದೇ ಅವಹೇಳನಕಾರಿಯಾಗಿ, ಬಹಳ ಕೆಟ್ಟದಾಗಿ ಮಾತನಾಡಿದ್ದಾರೆ. ಹೀಗಾಗಿ ಅವರ ವಿರುದ್ದ ಪ್ರಕರಣ ದಾಖಲಿಸಲು‌ ಮುಂದಾಗಿದ್ದೇನೆ. ಪ್ರಕರಣ ದಾಖಲಿಸ ಬೇಕಾದರೆ ಅಡಿಷನಲ್ ಅಡ್ವೋಕೆಟ್ ಜನರಲ್ ಅವರ ಅನುಮತಿ ಪಡೆಯಬೇಕಾಗುತ್ತದೆ, ಅವರ ಪರ್ಮಿಷನ್‌ ಪಡೆದ ನಂತರ ಬೆಂಗಳೂರಿಗೆ ತೆರಳಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಹೇಳಿದರು.

ನ್ಯಾಯಾಲಯದಲ್ಲಿ ತೀರ್ಪು ಪ್ರಶ್ನೆ ಮಾಡುವುದಕ್ಕೆ ನಮ್ಮ ತಕರಾರು ಇಲ್ಲ

ಕರ್ನಾಟಕ ಹೈಕೋರ್ಟ್ ಹಿಜಾಬ್ ಕುರಿತು ನೀಡಿರುವ ತೀರ್ಪನ್ನು ಪ್ರಶ್ನೆ ಮಾಡುವ ಹಕ್ಕೆ ಅವರಿಗೆ ಇದೆ. ಅದನ್ನು ನಾವು ಪ್ರಶ್ನೆ ಮಾಡುತ್ತಿಲ್ಲ, ಆದರೆ ನ್ಯಾಯಾಲಯದ ತೀರ್ಪನ್ನು ಬಹಿರಂಗವಾಗಿಯೇ ಹೇಳಿಕೆ ನೀಡುವ ಮೂಲಕ, ಅಸಂವಿಧಾನಿಕ ತೀರ್ಪು ಎನ್ನುವ ಮೂಲಕ ನ್ಯಾಯಾಂಗ ನಿಂದನೆ ಮಾಡುವುದು ಸರಿಯಲ್ಲ. ಹಾಗಾಗಿ ಇದು ಹೀಗೆ ಮುಂದುವರೆಯಬಾರದು ಎಂಬ ಕಾರಣಕ್ಕಾಗಿಯೇ ನಾವು ಈಗ ಪ್ರಕರಣ ದಾಖಲಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button