Breaking NewsLatestಬೆಂಗಳೂರು ಗ್ರಾಮಾಂತರಮೆಟ್ರೋರಾಜಕೀಯರಾಜ್ಯರಾಮನಗರಸುದ್ದಿ

ಮೇಕೆದಾಟು ಪಾದಯಾತ್ರ: ತಂತ್ರ ಬದಲಿಸಿ ಮೌನ ನಡಿಗೆಗೆ ಶರಣಾದ ಡಿ.ಕೆ.ಶಿವಕುಮಾರ್

ರಾಮನಗರ: ಮೇಕೆದಾಟು ಪಾದಯಾತ್ರೆ ಸಂಬಂಧ  ಬಿಜೆಪಿ ತಂತ್ರಕ್ಕೆ ಪ್ರದೇಶ ಕಾಂಗ್ರೆಸ್ ಪ್ರತಿ ತಂತ್ರರೂಪಿಸಿದೆ.  ಪಾದಯಾತ್ರೆಯನ್ನು ಹತ್ತಿಕ್ಕಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಮಂಗಳವಾರದಿಂದ ಮೌನವಾಗಿ  ನೀರಿಗಾಗಿ ನಡಿಗೆ ಹಮ್ಮಿಕೊಂಡಿದ್ದಾರೆ.  ಮೂರನೇ ದಿನವಾದ ಇಂದು ಬೆಳಗ್ಗೆ 8-30ರಿಂದ ಪಾದಯಾತ್ರೆ ಆರಂಭವಾಗಿದ್ದು ಕನಕಪುರದಿಂದ ರಾಮನಗರದತ್ತ ಸಾಗಿದೆ. ಸೋಮವಾರ ರಾತ್ರಿ ಕನಕಪುರದ ಡಿ.ಕೆ.ಶಿವಕುಮಾರ್  ಸ್ವಗೃಹದ ಬಳಿ ಪಾದಯಾತ್ರಿಗಳು ವಾಸ್ತವ್ಯಹೂಡಿದ್ದರು.

ಮಂಗಳವಾರ ಪಾದಯಾತ್ರೆ ಒಟ್ಟು 18 ಕಿ.ಮೀ ಕ್ರಮಿಸಲಿದೆ.  ಕನಕಪುರ ತಾಲೂಕಿನ ಚಿಕ್ಕೇನಹಳ್ಳಿಯಿಂದ  ರಾಮನಗರ ತಾಲೂಕು ಪ್ರವೇಶಿಸಿಲಿದೆ. ಸ್ಥಳಿಯರ ಜೊತೆಗೆ ಹಲವು ಜಿಲ್ಲೆಗಳ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳವಾರ ಕನಕಪುರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button