Breaking NewsLatestಮೆಟ್ರೋರಾಜ್ಯರಾಷ್ಟ್ರೀಯವಿದೇಶಸುದ್ದಿ

ಉಕ್ರೇನ್ ವಿರುದ್ಧ ಯುದ್ಧ ಆರಂಭಿಸಿದ ರಷ್ಯಾ, ವಿಶ್ವಕ್ಕೆ ಪುಟಿನ್ ಹೊಣೆಗಾರ: ಜೋ ಬಿಡೆನ್ ಎಚ್ಚರಿಕೆ

ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾದಿಮೀರ್ ಪುಟೀನ್ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ್ದಾರೆ. ರಷ್ಯಾದ ಪಡೆಗಳು ಕ್ರಿಮಿಯಾದಿಂದ ಉಕ್ರೇನಿಯನ್ ಪ್ರದೇಶವನ್ನು ಪ್ರವೇಶಿಸಿದವು. ಗುರುವಾರ ಬೆಳಗ್ಗೆ ಉಕ್ರೇನ್ ಹಲವಾರು ನಗರಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ಆರಂಭಿಸಿತು. ಕೈವ್, ಖಾರ್ಕಿವ್ ಮತ್ತು ಉಕ್ರೇನ್ ನ ಇತರೆ ಪ್ರದೇಶಗಳಲ್ಲಿ ದೊಡ್ಡ ಸ್ಫೋಟಗಳು ಕೇಳಿ ಬಂದಿವೆ.

ಇದಕ್ಕೂ ಮೊದಲು ರಷ್ಯಾದ ಅಧ್ಯಕ್ಷ ಪುಟಿನ್, ಮಾಸ್ಕೋ ಪೂರ್ವ ಉಕ್ರೇನ್ ನಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಲಿದೆ ಎಂದು ಹೇಳಿದರು.

ದೂರದರ್ಶನ ಭಾಷಣದಲ್ಲಿ, ಪುಟಿನ್ ಉಕ್ರೇನಿಯನ್ ಪಡೆಗಳನ್ನು ಶರಣಾಗುವಂತೆ ಕೇಳಿಕೊಂಡರು. ಉಕ್ರೇನ್ ನಿಂದ ಬರುತ್ತಿರುವ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಉಕ್ರೇನ್ ವಶಪಡಿಸಿಕೊಳ್ಳುವ ಗುರಿಯನ್ನು ರಷ್ಯಾ ಹೊಂದಿಲ್ಲ ಎಂದು ಪುಟಿನ್ ಹೇಳಿದರು.

ರಕ್ತಪಾತದ ಜವಾಬ್ದಾರಿಯು ಉಕ್ರೇನಿಯನ್ ಆಡಳಿತದ ಮೇಲಿದೆ ಎಂದು ಅವರು ಹೇಳಿದರು. ರಷ್ಯಾದ ಕ್ರಮದಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಪ್ರಯತ್ನವೂ ಅವರು ಹಿಂದೆಂದೂ ನೋಡಿರದ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಪುಟಿನ್ ಇತರ ದೇಶಗಳಿಗೆ ಎಚ್ಚರಿಕೆ ನೀಡಿದರು.

ಉಕ್ರೇನ್ ಅನ್ನು ನ್ಯಾಟೋಗೆ ಸೇರುವುದನ್ನು ತಡೆಯುವ ರಷ್ಯಾದ ಬೇಡಿಕೆಗಳನ್ನು ಯುಸಿ ಮತ್ತು ಅದರ ಮಿತ್ರರಾಷ್ಟ್ರಗಳು ನಿರ್ಲಕ್ಷಿಸುತ್ತಿವೆ ಎಂದೂ ಅವರು ಆರೋಪಿಸಿದರು.

ಜಗತ್ತು ರಷ್ಯಾವನ್ನು ಹೊಣೆಗಾರರನ್ನಾಗಿಸುತ್ತದೆ: ಜೋ ಬಿಡನ್

ಅಮೆರಿಕಾ ಅಧ್ಯಕ್ಷ ಜೋ ಬಿಡನ್, ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು ಖಂಡಿಸಿದ್ದಾರೆ. ರಷ್ಯಾ ಮತ್ತು ಅದರ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಜಗತ್ತು ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ಪ್ರತಿಜ್ಞೆ ಮಾಡಿದರು. ಪುಟಿನ್ ಅವರು ಪೂರ್ವಯೋಜಿತ ಯುದ್ಧವನ್ನು ಆರಿಸಿಕೊಂಡಿದ್ದಾರೆ ಅದು ದುರಂತದ ಜೀವಹಾನಿ ಮತ್ತು ಮಾನವ ಸಂಕಟವನ್ನು ತರುತ್ತದೆ. ಈಗಾಗಲೇ ವಿಧಿಸಿರುವ ನಿರ್ಬಂಧಗಳನ್ನು ಮೀರಿ ಅಮೆರಿಕಾ ತೆಗೆದುಕೊಳ್ಳಲಿರುವ ಹೆಚ್ಚುವರಿ ಕ್ರಮಗಳನ್ನು ಘೋಷಿಸಲು ಇಂದು ಗುರುವಾರ (ಇಂದು) ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವುದಾಗಿ ಬಿಡೆನ್ ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button