Breaking NewsLatestಉಡುಪಿಜಿಲ್ಲಾ ಸುದ್ದಿ
ಉಕ್ರೇನ್ ನಿಂದ ಮಗ ಸುರಕ್ಷಿತವಾಗಿ ಬರಲು ಪೋಷಕರ ಹರಕೆ

ಉಡುಪಿ: ಯುದ್ಧಭೂಮಿ ಉಕ್ರೇನಿಂದ ಒಬ್ಬೊಬ್ಬರೇ ಕನ್ನಡಿಗರು ತವರಿಗೆ ವಾಪಸಾಗುತ್ತಿದ್ದಾರೆ. ಉಡುಪಿಯ ಉದ್ಯಾವರದ ಮೃಣಾಲ್ ಶೀಘ್ರ ನಮ್ಮ ಮಡಿಲು ಸೇರಲಿ ಎಂದು ಪೋಷಕರು ಹರಕೆ ಹೇಳಿದ ವಿಚಾರ ಈಗ ಗೊತ್ತಾಗಿದೆ. ಮೃಣಾಲ್ ತಾಯಿ ಸಂಧ್ಯಾ ಕಟಪಾಡಿ ಪೇಟೆಬೆಟ್ಟು ಬಬ್ಬು ಸ್ವಾಮಿ ಕೊರಗಜ್ಜ ದೈವಗಳಿಗೆ ತನ್ನ ಮಗ ಬರುವಂತೆ ಮಾಡು ಎಂದು ಹರಕೆ ಹೇಳಿದ್ದರು. ಕೋಳಿ ಹರಕೆ ಹೊತ್ತಿರುವ ತಾಯಿ, ಈಗ ಹರಕೆ ತೀರಿಸುವ ಸಿದ್ಧತೆ ಮಾಡಿದ್ದಾರೆ. ಇದೇ ಸಂದರ್ಭ ಕಲ್ಮಾಡಿ ಚರ್ಚಿನಲ್ಲಿ ಆರಾಧಿಸುವ ಮರಿಯಮ್ಮ ನಿಗೆ ಮಗ ಬೇಗ ಮನೆಗೆ ಬಂದರೆ ಒಂದು ಸೀರೆ ಕೊಡುವುದಾಗಿ ಹರಕೆ ಹೇಳಿದ್ದರು. ಮಗ ಮೃಣಾಲ್ ಊರಿಗೆ ಬರುತ್ತಿದ್ದಂತೆ ಸಂತಸಗೊಂಡಿರುವ ಪೋಷಕರು ಶೀಘ್ರ ತಮ್ಮ ಎರಡು ಹರಕೆಗಳನ್ನು ತಿಳಿಸುವುದಾಗಿ ಹೇಳಿದ್ದಾರೆ.
