Breaking NewsLatestಕೊಡಗುಕ್ರೈಂಜಿಲ್ಲಾ ಸುದ್ದಿರಾಜ್ಯಸುದ್ದಿ
ಕರ್ನಾಟಕದ ಕಾಶ್ಮೀರದಲ್ಲಿ ಹುಲಿ ದಾಳಿ ಹಸು ಬಲಿ!

ಕೊಡಗು: ಕೊಡಗಿನ ದಕ್ಷಿಣ ಭಾಗದಲ್ಲಿ ನರಭಕ್ಷಕ ಹುಲಿಯ ದಾಳಿ ಮುಂದುವರಿದಿದ್ದು, ಹಲವು ದಿನಗಳ ಅಂತರದಲ್ಲಿ ಮತ್ತೊಂದು ಹಸು ವ್ಯಾಘ್ರನ ದಾಳಿಗೆ ಬಲಿಯಾಗಿದೆ.
ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಕುಂದಾ ಈಚೂರು ಗ್ರಾಮದ ಮದ್ರಿರ ದೇವಯ್ಯನವರ ಹಸುವನ್ನು ಕೊಂದು ತಿಂದು ಹಾಕಿದೆ.
ಇದು ದಕ್ಷಿಣ ಕೊಡಗು ಜನರಲ್ಲಿ ವಿಶೇಷವಾಗಿ ಕಾಫಿ ಎಸ್ಟೇಟ್ನಲ್ಲಿ ಕೆಲಸ ಮಾಡುವ ಜನರಲ್ಲಿ ಭಯವನ್ನು ಉಂಟುಮಾಡಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಭಕ್ಷಕ ಹುಲಿಯ ಬೇಟೆಗೆ ರೂಪುರೇಷೆ ಸಿದ್ದಪಡಿಸುತ್ತಿದ್ದಾರೆ.
