Breaking NewsLatest

‘ಕಾಂತಾರ ಕ್ಲೈಮ್ಯಾಕ್ಸ್​ ನೋಡಿ ರೋಮಾಂಚನ ಆಯ್ತು’; ರಿಷಬ್​ ಶೆಟ್ಟಿ ಚಿತ್ರಕ್ಕೆ ಹೃತಿಕ್​ ರೋಷನ್​ ಮೆಚ್ಚುಗೆ

ದೇಶಾದ್ಯಂತ ಹೊಸ ಸಂಚಲನ ಮೂಡಿಸಿದ ‘ಕಾಂತಾರ’  ಚಿತ್ರದ ಬಗ್ಗೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಭಾಷೆಗಳ ಗಡಿ ಮೀರಿ ಈ ಚಿತ್ರ ಯಶಸ್ಸು ಕಂಡಿದೆ. ರಿಷಬ್​ ಶೆಟ್ಟಿ  ಅವರ ನಟನೆ ಮತ್ತು ನಿರ್ದೇಶನಕ್ಕೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಚಿತ್ರಮಂದಿರದಲ್ಲಿ ಅಬ್ಬರಿಸಿದ ‘ಕಾಂತಾರ’ ಈಗ ಒಟಿಟಿಯಲ್ಲೂ ಸದ್ದು ಮಾಡುತ್ತಿದೆ. ನೆಟ್​ಫ್ಲಿಕ್ಸ್​ ಮೂಲಕ ಈ ಚಿತ್ರದ ಹಿಂದಿ ವರ್ಷನ್​ ವೀಕ್ಷಣೆಗೆ ಲಭ್ಯವಾಗಿದೆ. ಬಾಲಿವುಡ್​ನ ಖ್ಯಾತ ನಟ ಹೃತಿಕ್ ರೋಷನ್​  ಅವರು ಕೂಡ ಕಾಂತಾರ

ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರಿಗೆ ಚಿತ್ರದ ಕ್ಲೈಮ್ಯಾಕ್ಸ್​ ಸಖತ್​ ಇಷ್ಟ ಆಗಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

‘ಕಾಂತಾರ ಸಿನಿಮಾವನ್ನು ನೋಡಿ ಸಾಕಷ್ಟು ವಿಷಯ ಕಲಿತುಕೊಂಡೆ. ರಿಷಬ್​ ಶೆಟ್ಟಿ ಅವರಿಂದಾಗಿ ಈ ಸಿನಿಮಾ ಅಸಾಧಾರಣ ಎನಿಸಿಕೊಂಡಿದೆ. ನಿರೂಪಣೆ, ನಟನೆ ಮತ್ತು ನಿರ್ದೇಶನ ಅತ್ಯುತ್ತಮವಾಗಿದೆ. ಕ್ಲೈಮ್ಯಾಕ್ಸ್​ನಲ್ಲಿ ಕಂಡ ಬದಲಾವನೆಯಿಂದ ನನಗೆ ರೋಮಾಂಚನ ಆಯಿತು. ಇಡೀ ತಂಡಕ್ಕೆ ನನ್ನ ಗೌರವ ಮತ್ತು ಅಭಿನಂದನೆಗಳು’ ಎಂದು ಹೃತಿಕ್​ ರೋಷನ್​ ಪೋಸ್ಟ್​ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button