Breaking NewsLatestಕಲಬುರ್ಗಿಜಿಲ್ಲಾ ಸುದ್ದಿ
ಅಲ್‌ಖೈದಾ ಜೊತೆ ಮುಸ್ಕಾನ್ ಸಂಪರ್ಕ ಸಾಧ್ಯತೆ; ವಶಕ್ಕೆ ಪಡೆಯಲು ಹಿಂದೂ ಸಂಘಟನೆಗಳ ಆಗ್ರಹ

ಕಲಬುರಗಿ: ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಹಾಗೂ ಪಾಕಿಸ್ತಾನದ ಉಗ್ರರಿಗೆ ನಂಟಿರುವ ಸಾಧ್ಯತೆ ಇದೆ. ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು ಅಂತ ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.
ಹಿಂದೂ ಯುವಕರ ಮುಂದೆ ಅಲ್ಲಾ ಹೂ ಅಕ್ಬರ್ ಅಂತ ಘೋಷಣೆ ಕೂಗಿ ಪ್ರತಿರೋಧ ವ್ಯಕ್ತ ಪಡಿಸಿದ್ದ ವಿದ್ಯಾರ್ಥಿನಿ ಮುಸ್ಕಾನ್ ಳನ್ನು ಅಲ್‌ಖೈದಾ ಉಗ್ರ ಜವಹಾರಿ ಹಾಡಿ ಹೊಗಳಿದ್ದಾನೆ., ಈ ವಿಚಾರ ಈಗ ಬಾರಿ ಚರ್ಚೆಗೆ ಕಾರಣವಾಗಿದೆ. ಮುಸ್ಕಾನ್‌ಳಿಗೆ ಪಾಕಿಸ್ಥಾನ ಉಗ್ರರಿಗೆ ನಂಟಿರುವಂತೆ ಕಂಡುಬರುತ್ತಿದೆ. ಆಕೆಯನ್ನು ವಿಚಾರಣೆಗೆ ಒಳಪಡಿಸಬೇಕು ಅಂತ ಕಲಬುರಗಿಯಲ್ಲಿ ಹಿಂದೂಪರ ಕಾರ್ಯಕರ್ತೆ ದಿವ್ಯಾ ಹಾಗರಗಿ ಆಗ್ರಹಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರ ಗೃಹ ಇಲಾಖೆಯವರು ಮುಸ್ಕಾನ್ ಳನ್ನು ವಶಕ್ಕೆ ಪಡೆಯಬೇಕು. ಉಗ್ರರ ಜೊತೆ ಲಿಂಕ್ ಇದೆಯಾ ಅನ್ನೋ ಬಗ್ಗೆ ಸಮಗ್ರ ತನಿಖೆಯಾಗಬೇಕು. ವಿಚಾರಣೆ ಮುಗಿಯೋವರಗೆ ಅಕೆಯನ್ನು ಹೊರ ಬಿಡಬಾರದು. ಒಂದು ವೇಳೆ ಉಗ್ರರ ಸಂಪರ್ಕ ಇದ್ರೆ ಆಕೆಯನ್ನು ಪಾಕಿಸ್ತಾನಕ್ಕೆ ಬಿಟ್ಟು ಬರಬೇಕು ಅಂತ ಒತ್ತಾಯಿಸಿದ್ದಾರೆ.
