Breaking NewsLatestಕ್ರೈಂಜಿಲ್ಲಾ ಸುದ್ದಿಹಾವೇರಿ
ಹಾವೇರಿಯಲ್ಲಿ ಹಾವು ಕಚ್ಚಿ ಬಾಲಕಿ ಸಾವು

ಹಾವೇರಿ: ಮನೆಯಲ್ಲಿ ಮಲಗಿದ್ದ ವೇಳೆ ಹಾವು ಕಚ್ಚಿ ಅಲೆಮಾರಿ ಜನಾಂಗದ ಐದು ವರ್ಷದ ಬಾಲಕಿ ಮೃತಪಟ್ಟ ಘಟನೆ ಹಾವೇರಿಯ ನಾಗೇಂದ್ರಮಟ್ಟಿಯ ಹೊರವಲಯದಲ್ಲಿರೋ ಟೆಂಟ್ ನಲ್ಲಿ ನಡೆದಿದೆ.
ಒಲಿವ್ವ ಸುಂಕಣ್ಣ ಮೋತಿ (5) ಮೃತ ಬಾಲಕಿ. ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಟೆಂಟ್ ನಲ್ಲಿ ಮಲಗಿದ್ದ ಬಾಲಕಿಗೆ ವಿಷಪೂರಿತ ಹಾವು ಕಚ್ಚಿದೆ. ಬೆಳಗ್ಗೆ 4 ಗಂಟೆಯ ಸಂದರ್ಭದಲ್ಲಿ ಮಗಳಿಗೆ ಹಾವು ಕಚ್ಚಿರುವ ವಿಷಯ ಹೆತ್ತವರಿಗೆ ಗೊತ್ತಾಗಿದೆ. ತಕ್ಷಣವೇ ಜಿಲ್ಲಾಸ್ಪತ್ರೆಗೆ ಮಗಳನ್ನು ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅಷ್ಟರಲ್ಲಾಗಲೇ ಹಾವಿನ ವಿಷ, ದೇಹವನ್ನ ಆವರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.
ಅಲೆಮಾರಿ ಜನಾಂಗದವರಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಇಲ್ಲಿ ಹಾವು ಕಚ್ಚಿ ಈಗಾಗಲೇ ಮೂರು ಮಂದಿ ಸಾವನ್ನಪ್ಪಿದ್ದಾರೆ. ಈಗಾಲಾದರೂ ರಾಜ್ಯ ಸರ್ಕಾರ ಅಲೆಮಾರಿಗಳಿಗೆ ಗುಡಿಸಲು ನಿರ್ಮಿಸಿ, ಮೃತ ಬಾಲಕಿ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
