Breaking NewsLatestವಿದೇಶ
ಪಂಜ್ಶಿರ್: ತಾಲಿಬಾನ್ ವಶವೆಂಬುದು ಸುಳ್ಳೆಂದ ಎನ್ಆರ್ಎಫ್

ಕಾಬೂಲ್: ಪಂಜ್ಶಿರ್ ಕಣಿವೆಯಲ್ಲಿ ತಾಲಿಬಾನಿಗಳ ವಿರುದ್ಧದ ಹೋರಾಟ ಮುಂದುವರಿದಿದ್ದರೂ, ಪಂಜ್ಶಿರ್ ಪೂರ್ತಿ ತನ್ನ ವಶವಾಗಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ.
ಅಫ್ಘಾನಿಸ್ತಾನದ ನ್ಯಾಷನಲ್ ರೆಸಿಸ್ಟನ್ಸ್ ಫ್ರಂಟ್ (ಎನ್ಆರ್ಎಫ್) ಪಡೆಯ ಹಿಡಿತದಲ್ಲಿದ್ದ ಪಂಜ್ಶಿರ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವುದಾಗಿ ತಾಲಿಬಾನ್ ಘೋಷಿಸಿದೆ.
ಪಂಜ್ಶಿರ್ ಪ್ರಾಂತ್ಯದ ಗವರ್ನರ್ ಕಚೇರಿಯಲ್ಲಿ ತಾಲಿಬಾನ್ ಯೋಧರು ನಿಂತಿರುವ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.
ಆದರೆ, ತಾನಿಬಾನ್ ಪ್ರತಿಪಾದಿಸುತ್ತಿರುವುದು ಸುಳ್ಳೆಂದು ಎನ್ಆರ್ಎಫ್ ಹೇಳಿದೆ. ನಮ್ಮ ಯೋಧರೂ ಇನ್ನೂ ಪಂಜ್ಶಿರ್ ಪ್ರಾಂತ್ಯದಲ್ಲಿ ಕದನ ಮುಂದುವರಿಸಿರುವುದಾಗಿ ಅದು ಹೇಳಿದೆ.
ನ್ಯಾಯ ಮತ್ತು ಸ್ವಾತಂತ್ರ್ಯ ದೊರೆಯುವವರೆಗೂ ನಮ್ಮ ಹೋರಾಟ ತಾಲಿಬಾನಿಗಳು ಮತ್ತವರ ಜೊತೆ ನಿಂತವರ ವಿರುದ್ಧ ಮುಂದುವರಿಯಲಿದೆ ಎಂದು ಎನ್ಆರ್ಎಫ್ ಟ್ವೀಟ್ ಮಾಡಿದೆ.
