Breaking NewsLatestಜಿಲ್ಲಾ ಸುದ್ದಿಮನರಂಜನೆಮೈಸೂರುಸಿನಿಮಾಸ್ಯಾಂಡಲ್ ವುಡ್
ಶಕ್ತಿಧಾಮದ ಮಕ್ಕಳಿಗೆ ಅಪ್ಪು ಭಾವಚಿತ್ರದ ಬೆಳ್ಳಿ ಡಾಲರ್ ಅಭಿಮಾನಿ ಗಿಫ್ಟ್

ಮೈಸೂರು: ನಟ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರವಿರುವ ಬೆಳ್ಳಿ ಡಾಲರ್ ಅನ್ನು ಶಕ್ತಿಧಾಮದ ಮಕ್ಕಳಿಗೆ ಅಭಿಮಾನಿಯೊಬ್ಬರು ನೀಡಿದ್ದಾರೆ. ಬೆಂಗಳೂರಿನ ದೇವಿನಗರದ ನಿವಾಸಿ ಅರ್ಜುನ, ಪತ್ನಿ ಬೃಂದಾಶ್ರೀ 50ಕ್ಕೂ ಹೆಚ್ಚು ಬೆಳ್ಳಿ ಡಾಲರ್ಗಳನ್ನು ಶಕ್ತಿಧಾಮದ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.
ಪುನೀತ್ ಅವರು ಇರುವಾಗಲೇ ಅವರ ಮುಖೇನ ಪ್ರತಿಭಾನ್ವಿತ ಮಕ್ಕಳಿಗೆ ಬೆಳ್ಳಿ ಡಾಲರ್ಗಳನ್ನು ಕೊಡಬೇಕು ಅಂದುಕೊಂಡಿದ್ದೆವು. ಆದ್ರೆ ಅದು ಸಾಧ್ಯವಾಗಲಿಲ್ಲ. ಈಗ ಅವರ ಭಾವಚಿತ್ರವಿರುವ ಬೆಳ್ಳಿ ಡಾಲರ್ಗಳನ್ನು ನೀಡಿದ್ದೇನೆ’ ಎಂದು ದಂಪತಿ ಭಾವುಕರಾದರು.
