Breaking NewsLatestಕ್ರೈಂಜಿಲ್ಲಾ ಸುದ್ದಿರಾಜ್ಯರಾಮನಗರಸುದ್ದಿ

ಹಿಜಾಬ್ ತೀರ್ಪು ವಿರೋಧಿಸಿ ಬಂದ್: ರೇಷ್ಮೆನಗರಿಯಲ್ಲಿ ಮಿಶ್ರ ಪ್ರತಿಕ್ರಿಯೆ

ರಾಮನಗರ:  ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಮರ ಪ್ರತಿಭಟನೆ ಹಿನ್ನೆಲೆ ರಾಮನಗರದಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಅಂಗಡಿ ಮುಂಗಟ್ಟುಗಳಷ್ಟೇ ಬಂದ್ ಆಗಿದ್ದು, ಎಂದಿನಂತೆ ವರ್ತಕರು ವ್ಯಾಪಾರ ವಹಿವಾಟು ನಡೆಯುತ್ತಿದೆ. ಎಂದಿನಂತೆ ಮುಸ್ಲಿಂ ಸಮುದಾಯದ ವರ್ತಕರು ವಹಿವಾಟು ನಡೆಸುತ್ತಿದ್ದಾರೆ.

ಚನ್ನಪಟ್ಟಣದ ರೇಷ್ಮೆ ಬೆಳೆಗಾರರ ಪ್ರತಿಭಟನೆ

ಚನ್ನಪಟ್ಟಣದ ರೇಷ್ಮೆ ಮಾರುಕಟ್ಟೆಗೆ ಡೀಲರ್ಸ್ ಗಳು ಬಾರದ ಹಿನ್ನಲೆಯಲ್ಲಿ   ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ರೈತರು ಮಾರುಕಟ್ಟೆಯಲ್ಲಿನ ಕ್ರೇಟುಗಳನ್ನು ರಸ್ತೆಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರಿಂದ ರೈತರ ಮನವೊಲಿಸುವ ಕಾರ್ಯ ನಡೆಸಿದರು. ರೈತರು ಸಮಾಧಾನಗೊಳ್ಳದೇ ಪ್ರತಿಭಟನೆ ಮುಂದುವರೆಸಿದರು. ಈ ವೇಳೆ ಸಿಆರ್ ಪಿ ತುಕಡಿ ಸ್ಥಳಕ್ಕೆ ಬಂದರು ರೇಷ್ಮೆ‌ ಬೆಳೆಗಾರರು ಜಗ್ಗದೇ ರಸ್ತೆ ತಡೆ ನಡೆಸಿದರು. ಈ ವೇಳೆ ಉದ್ವಿಗ್ನತೆ ಜೊತೆಗೆ ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು. ಇದರಿಂದ ಪ್ರಯಾಣಿಕರು ಪರದಾಡಿದರು.

ಇದೇ ಸಂದರ್ಭದಲ್ಲಿ ರೇಷ್ಮೆ ಹರಾಜು ಆಗದ ಹಿನ್ನೆಲೆಯಲ್ಲಿ ಕೆಲ ರೈತರು ಮನೆಯತ್ತ ಗೂಡು ಕೊಂಡೊಯ್ಯುತ್ತಿದ್ದ ದೃಶ್ಯ ಕೂಡ ಕಂಡುಬಂತು. ಈ ವೇಳೆ ಬದಲಿ ವ್ಯವಸ್ಥೆ ಮಾಡುವುದಾಗಿ ಮಾರುಕಟ್ಟೆ  ಅಧಿಕಾರಿಗಳು ಮನವಿ ಮಾಡಿದರು.

ಹೆಚ್ಡಿಕೆ ಮದ್ಯ ಪ್ರವೇಶ

ರೇಷ್ಮೆ ಗೂಡು ಖರೀದಿಗೆ ಮುಂದಾಗದ ಡೀಲರ್ ಗಳು ಹಾಗೂ ರೈತರ ರಸ್ತೆ ತಡೆ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕ ಹಾಗೂ ಮಾಜಿ ಸಿಎಂ ದೂರವಾಣಿ ಮೂಲಕ ಉನ್ನತ ಮಟ್ಟದ ಅಧಿಕಾರಿಗಳ  ಮಾತುಕತೆ ನಡೆಸಿ, ರೇಷ್ಮೆಗೂಡು ಖರೀದಿಗೆ ಬದಲಿ ವ್ಯವಸ್ಥೆ ಕಲ್ಪಿಸಲು ಸಲಹೆ ನೀಡಿ, ದೂರವಾಣಿಯಲ್ಲಿ  ರೈತರ ಮನವೊಲಿಸಲು ಮುಂದಾದರು.

 ರೈತರು ಹೆದರುವ ಅವಶ್ಯಕತೆ ಇಲ್ಲವೆಂದ  ಹೆಚ್‌ಡಿಕೆ ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ಖರೀದಿ ವ್ಯವಸ್ಥೆ ಮಾಡಲು ಕ್ರಮ ವಹಿಸುವಂತೆ ರೇಷ್ಮೆ ಅಧಿಕಾರಿಗಳಿಗೆ ಹೆಚ್‌ಡಿಕೆ ನಿರ್ದೇಶನ ನೀಡಿದರು. ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ಸಂಘಟನೆಗಳ ಕರೆಗೆ ಓಗೊಟ್ಟಿದ್ದ ಡೀಲರ್ಸ್ ಗಳು ರೇಷ್ಮೆ ಗೂಡು ಖರೀದಿಗೆ ಹಿಂದೇಟು ಹಾಕಿದ್ದರು. ಡೀಲರ್ಸ್ ಗಳ ಜೊತೆ ಹೆಚ್ಡಿಕೆ ಅವರು ಮಾತುಕತೆ ನಡೆಸಿ, ಮಾತುಕತೆ ಸಫಲಗೊಂಡು, ಮಧ್ಯಹ್ನದ ವೇಳೆಗೆ ರೇಷ್ಮೆಗೂಡು ಖರೀದಿಗೆ  ಡೀಲರ್ಸ್ ಗಳು ಮುಂದಾದರು.

ಇದರಿಂದ ನಿರಾಳರಾದ ರೈತರು, ಎಂದಿನಂತೆ  ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಮೂಲಕ‌ ಗೂಡು ಖರೀದಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button