Breaking NewsLatestಕೊಡಗುಕ್ರೈಂಜಿಲ್ಲಾ ಸುದ್ದಿರಾಜ್ಯಸುದ್ದಿ

ಹಿಜಾಬ್ ವಿವಾದ: ಕೋರ್ಟ್ ಆದೇಶ ವಿರೋಧಿಸಿ ಕೊಡಗಿನಲ್ಲಿ ಶಾಂತಿಯುತ ಬಂದ್!

ಕೊಡಗು : ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ, ಕೊಡಗು ಜಿಲ್ಲೆಯ ಮುಸ್ಲಿಂ ವರ್ತಕರು ಗುರುವಾರ ತಮ್ಮ ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ನೆನ್ನೆ ದಿನ ರಾತ್ರಿ ಮುಸ್ಲಿಂ ಸಂಘಟನೆಯ ಪದಾಧಿಕಾರಿಗಳು ಮುಸ್ಲಿಂ ಸಮುದಾಯದ ಅಂಗಡಿಗಳಿಗೆ ತೆರಳಿ ಇಂದಿನ ದಿನದ ಬಂದ್ ಗೆ ಬೆಂಬಸಿಲಿಸುವಂತೆ ಮನವಿ ಮಾಡುತ್ತಿದ್ದದ್ದು ಕಂಡು ಬಂತು.

ಅದರಂತೆ ಇಂದು ಮಡಿಕೇರಿಯ ಚೌಕಿ, ರೇಸ್ ಕೋರ್ಸ್ ರಸ್ತೆ, ಕಾಲೇಜು ರಸ್ತೆ, ತಿಮ್ಮಯ್ಯ ವೃತ್ತದಲ್ಲಿನ ಮೊಬೈಲ್ ಅಂಗಡಿ, ತರಕಾರಿ ಮಾರಾಟ ಅಂಗಡಿ, ಬಟ್ಟೆ, ದಿನಸಿ, ಸ್ಪೈಸಿಸ್ ಮಳಿಗೆ, ಹೋಟೆಲ್‌ಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ. ಕೊಡಗಿನ ಪ್ರಮುಖ ನಗರಗಳಾದ ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪಲು, ಸೋಮವಾರಪೇಟೆಯಲ್ಲೂ ಶಾಂತಿಯುತ ಬಂದ್ ನಡೆಯುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button