Breaking NewsLatestಬಾಗಲಕೋಟೆರಾಜಕೀಯರಾಜ್ಯ

ಕುರ್ಚಿ ಉಳಿಸಿಕೊಳ್ಳಲು ಬಿಎಸ್​ವೈ, ದುಡ್ಡು ಹೊಡೆಯಲು ಮಗ ಕಸರತ್ತು; ಸಿದ್ದರಾಮಯ್ಯ ವ್ಯಂಗ್ಯ

ಬಾಗಲಕೋಟೆ: ಯಡಿಯೂರಪ್ಪ ಕುರ್ಚಿ ಉಳಿಸಿಕೊಳ್ಳುವ ಕಸರತ್ಇನಲ್ಲಿ, ಅವರ ಮಗ ದುಡ್ಡು ಹೊಡೆಯುವುದರಲ್ಲಿ ನಿರತರಾಗಿದ್ದಾರೆ. ಇವೆರಡೇ ಕೆಲಸ ಮಾಡ್ತಿದ್ದಾರೆ. ನಾನು ಅಸೆಂಬ್ಲಿಯಲ್ಲಿ ಈ ವಿಷಯ ರೈಜ್ ಮಾಡಿದ್ದೆ. ಯಡಿಯೂರಪ್ಪ ಕುರ್ಚಿ ಅಲುಗಾಡಲು ಶುರುವಾಗಿ ಬಹಳ ದಿನವಾಯ್ತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬಾದಾಮಿಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ರಾಜ್ಯದಲ್ಲೇ ನಡೀತಿದೆ. ಯಡಿಯೂರಪ್ಪ ಕ್ಷೇತ್ರ ಶಿವಮೊಗ್ಗ, ಈಶ್ವರಪ್ಪ ಕ್ಷೇತ್ರ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲೂ ಅಕ್ರಮ ಗಣಿಗಾರಿಕೆ ನಡೀತಿದೆ ಎಂದು ಗಂಭೀರ ಆರೋಪ ಮಾಡಿದರು. ಚಿಕ್ಕಬಳ್ಳಾಪುರದಲ್ಲಿ ಸತ್ತು ಹೋದರು. ಶಿವಮೊಗ್ಗ ಗ್ರಾಮೀಣದಲ್ಲಿ ಬ್ಲಾಸ್ಟ್ ಆಗಿ ಸತ್ತರು. ಸರ್ಕಾರ ಯಾವುದನ್ನೂ ಗಂಭೀರವಾಗಿ ಪರಿಗಣಿಸಲ್ಲ ಎಂದರು.

ಅಕ್ರಮ ಗಣಿಗಾರಿಕೆ ನಡಿತಿದ್ದರೆ.ಅದನ್ನು ನಿಲ್ಲಿಸೋ ಜವಾಬ್ದಾರಿ ಸರ್ಕಾರದ್ದು.ಓರ್ವ ಲೋಕಸಭಾ ಸದಸ್ಯೆ ಸುಮಲತಾ ಅವರು, ಕಂಪ್ಲೇಂಟ್ ಮಾಡ್ತಿದ್ದಾರೆ. ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದರು.

ಮಂಡ್ಯಕ್ಕೆ ಸಿದ್ದರಾಮಯ್ಯಗೆ ಸುಮಲತಾ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು. ಮಂಡ್ಯಕ್ಕೆ ಬನ್ನಿ ಎಂದು ಕರೆದ್ರು. ಬರ್ತಿನಮ್ಮ ಒಂದು ಸಾರಿ ಎಂದು ಹೇಳಿದ್ದೇನೆ. ಯಾವಾಗ ಎಂದು ತೀರ್ಮಾನ ಮಾಡಿಲ್ಲ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button