Breaking NewsLatestರಾಷ್ಟ್ರೀಯ
ಮೋದಿ ಭೇಟಿಯಾದ ಶರದ್ ಪವಾರ್; ನೂತನ ಸಹಕಾರ ಖಾತೆ ಬಗ್ಗೆ ಕಳವಳ

ನವದೆಹಲಿ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ, ಹೊಸದಾಗಿ ಕೇಂದ್ರದಲ್ಲಿ ರಚಿಸಲಾಗಿರುವ ಮತ್ತು ಅಮಿತ್ ಶಾ ನೇತೃತ್ವದ ಸಹಕಾರ ಖಾತೆ ಬಗ್ಗೆ ಕಳವಳ ವ್ಯಕ್ತಪಡಿಸಿದರು.
50 ನಿಮಿಷಗಳ ಕಾಲ ಮೋದಿ ಜೊತೆ ನಡೆದ ಮಾತುಕತೆಯಲ್ಲಿ ರಾಜ್ಯಸಭಾ ಸದಸ್ಯ ಪವಾರ್, ರೈತರ ಸಮಸ್ಯೆಗಳ ಬಗ್ಗೆಯೂ ಚರ್ಚಿಸಿದರು ಎಂದು ಎನ್ಸಿಪಿ ಮೂಲಗಳು ಹೇಳಿವೆ.
ಮೋದಿ ಜೊತೆಗಿನ ಮಾತುಕತೆ ಮಾತ್ರವಲ್ಲದೆ ಪತ್ರವನ್ನೂ ಬರೆದಿರುವ ಪವಾರ್, ಸಹಕಾರ ಸಂಘಗಳು ರಾಜ್ಯಕ್ಕೆ ಸಂಬಮಧಪಟ್ಟ ವಿಚಾರ. ಇದರಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವುದು ಸಂವಿಧಾನದ ಉಲ್ಲಂಘನೆ ಎಂದು, ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ್ದಾರೆ.
