ಧಾರವಾಡ ಜಿಲ್ಲೆಯಲ್ಲಿ ಜ.13ರಿಂದ ಶಾಲೆ ಬಂದ್: ಡಿಸಿ ಆದೇಶ
ಧಾರವಾಡ: ರಾಜ್ಯಾದ್ಯಂತ ಕೊರೊನಾ ಮಾಹಾಮಾರಿ ವೈರಸ್ ಹಾಗೂ ಓಮಿಕ್ರಾನ್ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದ್ದು, ಧಾರವಾಡ ಜಿಲ್ಲೆಯಲ್ಲೂ ಈಗ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗ ಮುಂಜಾಗ್ರತಾ ಕ್ರಮವಾಗಿ ಹಾಗೂ ಮಕ್ಕಳ ಆರೋಗ್ಯ ದೃಷ್ಟಿಯಿಂದ ಧಾರವಾಡ ಹಾಗೂ ಹುಬ್ಬಳ್ಳಿಯ ನಗರ ಸೇರಿ ಗ್ರಾಮೀಣ ಭಾಗದ 1 ರಿಂದ 8ನೇ ತರಗತಿಯ ಶಾಲೆಗಳಿಗೆ ಜ.13 ರಿಂದ ಮುಂದಿನ ಆದೇಶದ ರಜೆ ಘೋಷಣೆ ಮಾಡಿ ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಧಾರವಾಡ ನಗರ ಹಾಗೂ ಗ್ರಾಮೀಣ ಭಾಗ ಸೇರಿ ತಾಲೂಕಿನಲ್ಲಿ 5.38 ಪಾಸಿವಿಟಿ ಬಂದಿದ್ದು, ಹುಬ್ಬಳ್ಳಿಯ ನಗರ ಸೇರಿ ಗ್ರಾಮೀಣ ಭಾಗದಲ್ಲಿ 11.78% ವೈರಸ್ ಪಾಸಿಟಿವಿಟಿ ಕಂಡು ಬಂದಿದೆ. ಹಾಗಾಗಿ ವಿದ್ಯಾರ್ಥಿಗಳ ವಸತಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳು ಸೇರಿ 1ರಿಂದ8 ತರಗತಿಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮುಂದಿನ ಆದೇಶ ಬರುವವರೆಗೂ ಜ.13 ರಿಂದ ರಜೆ ವ್ಯಾಪ್ತಿಗೆ ಬರುವ 1ರಿಂದ 8 ತರಗತಿಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ತರಗತಿ ನಡೆಸಬಹುದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
