Breaking NewsLatestವಿಜ್ಞಾನ / ತಂತ್ರಜ್ಞಾನವಿಶೇಷ

ಭೂಮಿಗೆ ಹತ್ತಿರವಾಗುವ ಶನಿಗ್ರಹ ; ಆಗಸ್ಟ್ ಮಾಹೆಯಲ್ಲಿ ಹಲವು ಖಗೋಳ ವಿಸ್ಮಯ..!

ಕಿರುಗುಂದ ರಫೀಕ್

ಚಿಕ್ಕಮಗಳೂರು: ಈ ಆಗಸ್ಟ್ ತಿಂಗಳಲ್ಲಿ ಬಾನಂಗಳದಲ್ಲಿ ಒಂದರ ಹಿಂದೆ ಇನ್ನೊಂದರಂತೆ ಹಲವು ವಿಸ್ಮಯಗಳು ಸೃಷ್ಟಿಯಾಗಲಿದ್ದು, ಖಗೋಳ ವಿಜ್ಞಾನಿಗಳಿಗೆ ಇದು ಮಹತ್ವದ ಕಾಲವಾಗಿದೆ.

ಹೆಚ್ಚಾಗಿ ಸೂರ್ಯಗ್ರಹಣ, ಚಂದ್ರಗ್ರಹಣಗಳು ಮಾತ್ರವೇ ಸಂಭವಿಸುವುದನ್ನು ನಾವು ಕಾಣುತ್ತಿದ್ದೆವು. ಇನ್ನು ಮುಂದೆ ಶನಿಗ್ರಹಣ, ಗುರುಗ್ರಹಣ ಇತ್ಯಾದಿ ಗ್ರಹಣಗಳು ಭೂಮಿಗೆ ಗೋಚರವಾಗಲಿವೆ !

ಆಗಸ್ಟ್ 1ರ ರಾತ್ರಿ ಮತ್ತು ಸೋಮವಾರ ಮುಂಜಾನೆಯ ಅವಧಿಯೊಳಗೆ ಶನಿಗ್ರಹ ಭೂಮಿಗೆ ಹತ್ತಿರವಾಗುತ್ತದೆ. ಸೂರ್ಯ ಮತ್ತು ಶನಿಗ್ರಹದ ನಡುವೆ ಭೂಮಿ ಬರುತ್ತದೆ. ತಜ್ಞರಾಗಿರುವ ಬ್ರಿಟನ್‌ ರಾಯಲ್‌ ಅಸ್ಟ್ರೊನೊಮಿಕಲ್‌ ಸೊಸೈಟಿಯ ಡಾ.ರಾಬರ್ಟ್‌ ಮೆಸ್ಸಿ ಅವರು ಹೇಳಿರುವ ಪ್ರಕಾರ ಈ ಅವಧಿಯಲ್ಲಿ ಶನಿಗ್ರಹ ಯಾವುದೇ ಗ್ರಹಗಳಿಲ್ಲದ ಖಾಲಿ ಜಾಗದಲ್ಲಿ ಕಾಣಿಸಲಿದೆ. ಹೀಗಾಗಿ ಶನಿಗ್ರಹವನ್ನು ಸುಲಭವಾಗಿ ನೋಡಬಹುದು. ಹಳದಿ ನಕ್ಷತ್ರದಂತೆ ಏಕಾಂಗಿಯಾಗಿ ಗೋಚರಿಸಲಿದೆ. ಉಳಿದ ನಕ್ಷತ್ರಗಳಿಗಿಂತ ಪ್ರಕಾಶಮಾನವಾಗಿ ಗೋಚರಿಸಲಿದೆ ಎಂದು ತಜ್ಞರು ಹೇಳಿದ್ದಾರೆ.

ರಾತ್ರಿ ಸಂಭವಿಸುವ ʼಶನಿಗ್ರಹಣʼ ವೀಕ್ಷಿಸಲು ಯಾವುದೇ ಉಪಕರಣ ಬೇಕಾಗಿಲ್ಲ. ಬರಿಗಣ್ಣಿಗೆ ಗೋಚರವಾಗಲಿದೆ. ಆದರೆ ಈ ಗ್ರಹದಲ್ಲಿ ಎದ್ದುಕಾಣುವ ಉಂಗುರ ವ್ಯವಸ್ಥೆಯನ್ನೂ ನೋಡಬೇಕೆಂದರೆ ಟೆಲಿಸ್ಕೋಪ್‌ ಬಳಸಬೇಕಾಗುತ್ತದೆ. ಮೋಡ, ಮಳೆಯಿಂದ ಆಕಾಶ ಕಾಣಿಸದಿದ್ದರೆ ಈ ವಿಸ್ಮಯ ನೋಡಲು ಸಾಧ್ಯವಾಗದು.

ಇದೊಂದೇ ಅಲ್ಲ, ಈ ತಿಂಗಳಲ್ಲಿ ಹಲವು ಖಗೋಳ ವಿಸ್ಮಯಗಳು ಜರುಗಲಿವೆ. ಆ.11ರಂದು ಇದೇ ರೀತಿಯ ಇನ್ನೊಂದು ಘಟನೆ ನಡೆಯುತ್ತದೆ. ಚಂದ್ರ ಮತ್ತು ಶುಕ್ರ ಗ್ರಹ ಪರಸ್ಪರ ಹತ್ತಿರವಾಗಲಿದೆ. ಸೂರ್ಯ ಮುಳುಗಿದ ನಂತರ ಇದು ಗೋಚರವಾಗಲಿದೆ. ಇದೇ ದಿನ ರಾತ್ರಿ ಮತ್ತು ಆ.12ರಂದು ಉಲ್ಕಾಪಾತದ ಹಾವಳಿಯಿರುತ್ತದೆ. ಉತ್ತರ ಗೋಳಾರ್ಧದ ದೇಶಗಳಲ್ಲಿ ಪ್ರತೀ ತಾಸಿಗೆ ಸುಮಾರು 40 ಉಲ್ಕಾಪಾತಗಳು ಗೋಚರಿಸಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಇನ್ನು ಆಗಸ್ಟ್‌ 19ರಂದು ಸೂರ್ಯ ಮತ್ತು ಗುರುಗ್ರಹದ ನಡುವೆ ಭೂಮಿ ಬರಲಿದ್ದು ಗುರುಗ್ರಹ ಭೂಮಿಗೆ ಸನಿಹವಾಗಲಿದೆ. ಇನ್ನು ಆ.20ರಂದು ಶನಿಗ್ರಹ ಮತ್ತು ಚಂದ್ರ ಏಕಕೋನದಲ್ಲಿ ಕಾಣಿಸಲಿದೆ. ಭೂಮಿಯಿಂದ ನೋಡುವಾಗ ಚಂದ್ರನ ಹಿಂದೆ ಶನಿಗ್ರಹ ಕಾಣಿಸಲಿದೆ.

ಸೌರಮಂಡಲದಲ್ಲಿ 6ನೇ ಗ್ರಹವಾಗಿರುವ ಶನಿಗ್ರಹವು ಗುರುಗ್ರಹದ ನಂತರದ 2ನೇ ಅತಿದೊಡ್ಡ ಗ್ರಹ. ಸುತ್ತಲೂ ಇರುವ ಉಂಗುರಾಕೃತಿಯ ವ್ಯವಸ್ಥೆಯು ಮಂಜಿನ ಪುಡಿ, ಕಲ್ಲಿನ ಚೂರು ಮತ್ತು ಧೂಳಿನಂತಹ ವಸ್ತುಗಳಿಂದ ಸೃಷ್ಟಿಯಾಗಿದೆ ಎಂದು ತಿಳಿಯಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button