Breaking NewsLatestರಾಷ್ಟ್ರೀಯಸುದ್ದಿ
ಭಾರತಕ್ಕೆ ಭೇಟಿ ನೀಡಲಿರುವ ರಷ್ಯಾ ವಿದೇಶಾಂಗ ಸಚಿವ

ನವದೆಹಲಿ: ರಷ್ಯಾದ ವಿದೇಶಾಂಗ ಸಚಿವ ಸರ್ಗಿ ಲವ್ರೊವ್ ಸದ್ಯದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯದಿಂದ ಮಾತ್ರ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯ ಪರಿಣಾಮ ಅಮೆರಿಕ ಸೇರಿದಂತೆ ಹಲವು ದೇಶಗಳು ರಷ್ಯಾಗೆ ನಿರ್ಬಂಧ ವಿಧಿಸಿವೆ. ಈ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ತೈಲ ಖರೀದಿಸುವಂತೆ ರಷ್ಯಾ ಭಾರತವನ್ನು ಕೇಳಿಕೊಂಡಿತ್ತು.
ಸದ್ಯ ರಷ್ಯಾದಿಂದ ಅತ್ಯಧಿಕ ಪ್ರಮಾಣದ ತೈಲವನ್ನು ಭಾರತ ಖರೀದಿಸುತ್ತಿದೆ. ಈ ವಿಚಾರವಾಗಿ ಹಣ ವರ್ಗಾವಣೆ ಕುರಿತಂತೆ ಮಾತನಾಡಲು ಸರ್ಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ರಷ್ಯಾ ಸೇನೆಯಿಂದ ಮಿಲಿಟರಿ ಉಪಕರಣಗಳನ್ನೂ ಭಾರತ ಖರೀದಿಸುವ ಬಗ್ಗೆ ಮಾತುಕತೆ ನಡೆಯಲಿದೆ ಎನ್ನಲಾಗಿದೆ.
