
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪರಸ್ಪರ ಮಾತುಕತೆ ಸಿದ್ದರಾಗಿದ್ದಾರೆ. ರಷ್ಯಾದ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾದೊಂದಿಗೆ ತಾನು ಮಾತುಕತೆಗೆ ಸಿದ್ದ. ಆದರೆ ನೆರೆಯ ಬೆಲಾರುಸ್ನಲ್ಲಿ ಅಲ್ಲ. ಏಕೆಂದರೆ ಅದನ್ನು ಆಕ್ರಮಣಕ್ಕಾಗಿ ರಷ್ಯಾ ಲಾಂಚ್ ಪ್ಯಾಡ್ ನಂತೆ ಬಳಸುತ್ತಿದೆ ಎಂದು ಸ್ಪಷ್ಟಪಡಿಸಿದ್ಧಾರೆ.
ಬೆಲಾರುಸ್ ಬದಲು ವಾರ್ಸಾ, ಬ್ರಾಟಿಸ್ಲಾವಾ, ಬುಡಾಪೆಸ್ಟ್, ಇಸ್ತಾಂ ಬುಲ್, ಬಾಕು ನಲ್ಲಿ ಮಾತುಕತೆಗೆ ತಾವು ಸಿದ್ದ ಎಂದೂ ಝೆಲೆನ್ಸ್ಕಿ ಹೇಳಿದ್ದಾರೆ. ಇದಕ್ಕೆ ರಷ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ .ಇದಕ್ಕೂ ಮುನ್ನ ರಷ್ಯಾ ಬೆಲಾರುಸ್ ನಲ್ಲಿ ಉಕ್ರೇನ್ ಜತೆ ಶಾಂತಿ ಮಾತುಕತೆಗೆ ಸಿದ್ಧ ಎಂದು ಹೇಳಿತ್ತು.
ಈ ನಡುವೆ, ಉಕ್ರೇನ್ ನ 2ನೇ ಅತಿದೊಡ್ಡ ನಗರದಲ್ಲಿ ಭಾನುವಾರ ಬೀದಿ ಕಾಳಗಗಳು ಆರಂಭವಾಗಿವೆ. ರಷ್ಯಾ ಪಡೆಗಳು ಆಕ್ರಮಣದ ಹೊಸ ಹಂತವನ್ನು ಗುರುತಿಸಲು ಕಾಣಿಸಿಕೊಂಡಿರುವ ವಾಯು ನೆಲೆಗಳು ಮತ್ತು ಇಂಧನ ಸೌಲಭ್ಯಗಳ ಮೇಲಿನ ನಿರಂತರ ದಾಳಿಯ ನಂತರ ದೇಶದ ದಕ್ಷಿಣದ ಆಯಕಟ್ಟಿನ ಬಂದರುಗಳ ಮೇಲೆ ಹೆಚ್ಚಿನ ಒತ್ತಡವನ್ನು ಹೇರಿವೆ.
ಖಾರ್ಕಿವ್ ಪ್ರವೇಶಿಸಿದ ರಷ್ಯಾ ಪಡೆ
ಭಾನುವಾರ ರಷ್ಯಾದ ಪಡೆಗಳು ರಷ್ಯಾದ ಗಡಿಯಿಂದ ದಕ್ಷಿಣಕ್ಕೆ 12.4 ಮೈಲಿ ದೂರವಿರುವ ಖಾರ್ಕಿವ್ ಹೊರವಲಯದಲ್ಲಿ ಉಳಿದುಕೊಂಡಿದ್ದವು. ಅಲ್ಲಿ ಗ್ಯಾಸ್ ಪೈಪ್ ಲೈನ್ ಸ್ಫೋಟಿಸಿವೆ.
ಉಕ್ರೇನಿಯನ್ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ವಿಡಿಯೋಗಳು ರಷ್ಯಾದ ವಾಹನಗಳು ಖಾರ್ಕಿವ್ ನಾದ್ಯಂತ ಚಲಿಸುತ್ತಿರುವುದನ್ನು ಮತ್ತು ನಡು ರಸ್ತೆಯಲ್ಲಿ ಲಘು ವಾಹನಕ್ಕೆ ಬೆಂಕಿ ತಗುಲಿರುವುದನ್ನು ತೋರಿಸಿವೆ.
ಖಾರ್ಕಿವ್ ಪ್ರಾದೇಶಿಕ ಆಡಳಿತ ಮುಖ್ಯಸ್ಥ ಒಲೆಹ್ ಸಿನೆಹುಬೊವ್ ಅವರ ಪ್ರಕಾರ ಉಕ್ರೇನಿಯನ್ ಪಡೆಗಳು ಯುದ್ಧ ಸನ್ನದ್ಧರಾದವು ಮತ್ತು ನಾಗರಿಕರಿಗೆ ತಮ್ಮ ಮನೆಗಳಿಂದ ಹೊರಬರದಂತೆ ಹೇಳಿದರೆಂದು ತಿಳಿಸಿದ್ದಾರೆ.
