
ಬುಕಾರೆಸ್ಟ್ (ರೊಮೇನಿಯಾ) ಯುದ್ಧಪೀಡಿತ ಉಕ್ರೇನ್ ನಿಂದ ನೆರೆಯ ರಾಷ್ಟ್ರಗಳ ಗಡಿ ಭಾಗಗಳಿಗೆ ತೆರಳು ಪಾಕಿಸ್ತಾನ, ಟರ್ಕಿ ಮತ್ತಿತರ ನಿರಾಶ್ರಿತರಿಗೂ ಈಗ ಭಾರತದ ತ್ರಿವರ್ಣ ಧ್ವಜ ಆಸರೆಯಾಗಿದೆ. ನಮ್ಮ ರಾಷ್ಟ್ರಧ್ವಜದ ಆಸರೆಯಲ್ಲಿ ಹಲವು ರಾಷ್ಟ್ರಗಳ ನಾಗರಿಕರು ರೊಮೇನಿಯಾ ಗಡಿ ತಲುಪುವಲ್ಲಿ ಯಶಸ್ವಿಯಾಗಿದ್ಧಾರೆ.
ಯುದ್ಧಪೀಡಿತ ಉಕ್ರೇನ್ ನ ಕೆಲ ಪ್ರದೇಶಗಳ ಹಲವು ಚೆಕ್ ಪಾಯಿಂಟ್ ಗನ್ನು ಸುರಕ್ಷಿತವಾಗಿ ದಾಟಲು ಭಾರತದ ತ್ರಿವರ್ಣ ಧ್ವಜ ಆಸರೆಯಾಗಿದೆ. ಭಾರತದ ವಿದ್ಯಾರ್ಥಿಗಳೊಂದಿಗೆ ಪಾಕಿಸ್ತಾನ ಮತ್ತು ಟರ್ಕಿಯ ವಿದ್ಯಾರ್ಥಿಗಳು ಪಯಣಿಸಿದ್ದರು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ನಾಗಕರಿಕರು ಸ್ವದೇಶಕ್ಕೆ ಮರಳಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಹಲವರು ಕಷ್ಟಕ್ಕೆ ಸಿಲುಕಿದ್ಧಾರೆ. ಅಂತಹವರಿಗೆ ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೂಲಕ ಅಗತ್ಯ ನೆರವು ನೀಡುವ ಕೆಲಸವನ್ನು ಭಾರತ ಮಾಡುತ್ತಿದೆ. ನಾಲ್ವರು ಕೇಂದ್ರ ಸಚಿವರು ಕೂಡ ಉಕ್ರೇನ್ ರಾಷ್ಟ್ರಗಳಿಗೆ ತೆರಳಿ, ರಾಜತಾಂತ್ರಿಕ ಅಧಿಕಾರಿಗಳ ಸಹಯೋಗದೊಂದಿಗೆ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಆಪರೇಷನ್ ಗಂಗಾ ಮೂಲಕ ಹಲವರು ಈಗಾಗಲೇ ಸ್ವದೇಶಕ್ಕೆ ಮರಳಿದ್ದಾರೆ. ಭಾರತೀಯ ವಾಯುಪಡೆ ವಿಮಾನಗಳು ಕೂಡ ಭಾರತೀಯ ಪ್ರಜೆಗಳನ್ನು ಸ್ವದೇಶಕ್ಕೆ ಕರೆ ತರುವ ಕಾರ್ಯಕ್ಕೆ ನಿಯೋಜಿಸಲಾಗಿದೆ. ಜತೆಗೆ ಏರ್ ಇಂಡಿಯಾ, ಸ್ಪೈಸ್ ಜೆಟ್, ಇಂಡಿಗೂ ವಿಮಾನಗಳು ಕೂಡ ಇದೇ ಕಾರ್ಯದಲ್ಲಿ ಮಗ್ನವಾಗಿವೆ.
ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ನಿಂದ ಹೊರಡುವ ಮುನ್ನ ಸ್ಟ್ರೆ ಪೇಯಿಂಟ್ ಮತ್ತು ಪರದೆಗಳನ್ನು ಖರೀದಿಸಿದ್ದರು. ಅವುಗಳನ್ನು ಕತ್ತರಿಸಿ ಅವುಗಳ ಮೇಲೆ ಭಾರತದ ತ್ರಿವರ್ಣ ಧ್ವಜ ರೂಪಿಸಿದ್ದರು. ತ್ರಿವರ್ಣ ಧ್ವಜ ಹೊಂದಿರುವ ಪರದೆಗಳನ್ನು ಬಳಸಿ ಚೆಕ್ ಪಾಯಿಂಟ್ ಗಳಲ್ಲಿ ಯಾವುದೇ ಆತಂಕ ಇಲ್ಲದೆ ಮುಂದುವರಿದರು. ಜತೆಗೆ ಪಾಕಿಸ್ತಾನ ಮತ್ತು ಟರ್ಕಿ ವಿದ್ಯಾರ್ಥಿಗಳೂ ಇದ್ದರು ಎಂದು ಭಾರತದ ವಿದ್ಯಾರ್ಥಿಯೊಬ್ಬರು ತಿಳಿಸಿದ್ಧಾರೆ.
ಈ ನಡುವೆ ಪಾಕಿಸ್ತಾನದ ವಿದ್ಯಾರ್ಥಿಗಳಿಗೆ ಆ ದೇಶದ ರಾಯಭಾರ ಕಚೇರಿಯಿಂದ ಸಕಾಲಕ್ಕೆ ಸರಿಯಾದ ಸಹಕಾರ ಸಿಗದೇ ಸಿಲುಕಿದ್ದರು. ಈ ಬಗ್ಗೆ ಕೆಲ ವಿದ್ಯಾರ್ಥಿಗಳು ವಿಡಿಯೋ ಸಂದೇಶ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದರು.
