
ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಿಂದ ಜೈಲಿಗೆ ಹೋಗಿ ಈಗ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಆ ಒಂದು ವಿಚಾರಣೆ ಇನ್ನು ನಡೆಯುತ್ತಿದೆ.
ಆದರೆ ಶಾರೂಖ್ ಮಗ ಡ್ರಗ್ಸ್ ಸೇವಿಸಿರೋದಕ್ಕೆ ಯಾವುದೇ ಸಾಕ್ಷಿ ಸಿಕ್ಕಿಲ್ಲ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಈ ಸುದ್ದಿಯನ್ನು ಸುಳ್ಳು ಎಂದು ವಿಶೇಷ ತನಿಖಾ ತಂಡ ಹೇಳಿದೆ. ಈ ತನಿಖೆ ಜಾರಿಯಲ್ಲಿ ಇರುವುದರಿಂದ ಈಗಲೇ ಏನು ಹೇಳೋಕೆ ಆಗೋಲ್ಲ. ಆರ್ಯನ್ ಖಾನ್ ವಿರುದ್ಧ ಯಾವುದೇ ಸಾಕ್ಷಿ ಇಲ್ಲ ಎಂಬಂಥ ಒಂದು ವರದಿ ಪ್ರಸಾರವಾಗಿರುವುದು ಸಂಪೂರ್ಣ ಸುಳ್ಳು. ಜೊತೆಗೆ ಊಹಪೊಹಗಳಿಂದ ಕೂಡಿದೆ ಎಂದು ಹೇಳಿದೆ.
ಈ ಹಿಂದೆ ಆರ್ಯನ್ ಖಾನ್ ವಿರುದ್ಧ ಯಾವುದೇ ಪುರಾವೆಯನ್ನು ಎಸ್ಐಟಿ ಹೊಂದಿಲ್ಲ ಎಂದು ಮಂಗಳವಾರ ವರದಿ ಮಾಡಿತ್ತು. ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ವಿರುದ್ಧ ಸಾಕ್ಷ್ಯಗಳಿಲ್ಲ ಎಂದು ಅದು ಹೇಳಿತ್ತು. ಅಲ್ಲದೇ ಶಾರುಖ್ ಪುತ್ರ ಆರ್ಯನ್ ಅವರನ್ನು ಬಂಧಿಸಿದ್ದ ಕಾರ್ಡೆಲಿಯಾ ಕ್ರೂಸ್ ಶಿಪ್ ಮೇಲಿನ ದಾಳಿ ಪ್ರಕರಣದಲ್ಲಿ ಹಲವು ಅಕ್ರಮಗಳು ಕಂಡುಬಂದಿವೆ ಎಂದು ವರದಿಯಲ್ಲಿ ಹೇಳಲಾಗಿತ್ತು.
