Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜ್ಯಸುದ್ದಿ
ಆಪರೇಷನ್ ಗಂಗಾ: ನಾಳೆ 16 ವಿಮಾನಗಳು ಬೆಂಗಳೂರಿಗೆ: ಮನೋಜ್ ರಾಜನ್
ನವದೆಹಲಿ: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ನಿರಾಶ್ರಿತರನ್ನು ರಾಜ್ಯಕ್ಕೆ ಕರೆತರುವ ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆದಿದೆ. ಆಪರೇಷನ್ ಗಂಗಾ ಮೂಲಕ ಕರ್ನಾಟಕ ಮೂಲದ 149 ವಿದ್ಯಾರ್ಥಿಗಳು ರಾಜ್ಯಕ್ಕೆ ಮರಳಿದ್ದಾರೆ ಎಂದು ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ.ಮನೋಜ್ ರಾಜನ್ ತಿಳಿಸಿದ್ಧಾರೆ.
ದೆಹಲಿ ಮತ್ತು ಮುಂಬಯಿಯಿಂದ 24 ಬ್ಯಾಚ್ ಗಳು ಸ್ವದೇಶಕ್ಕೆ ಬಂದಿದ್ದು, ಸಂಜೆ ವೇಳೆಗೆ 34 ಜನರ ತಂಡ ಬೆಂಗಳೂರು ತಲುಪಲಿದೆ ಎಂದು ಸುದ್ದಿಸಂಸ್ಥೆ ಎಎನ್ ಐ ಗೆ ತಿಳಿಸಿದ್ದಾರೆ.
ಶುಕ್ರವಾರ 16 ವಿಮಾನಗಳು ಬೆಂಗಳೂರು ತಲುಪಲಿವೆ ಎಂದು ಮನೋಜ್ ರಾಜನ್ ಮಾಹಿತಿ ನೀಡಿದ್ದಾರೆ.
