Breaking NewsLatestರಾಜಕೀಯರಾಜ್ಯಶಿವಮೊಗ್ಗಸುದ್ದಿ

ವೀಕೆಂಡ್ ಕರ್ಫ್ಯೂ ಇಡಿ ರಾಜ್ಯಕ್ಕೆ ಬೇಕಿಲ್ಲ, ಗಡಿ ಜಿಲ್ಲೆಗೆ ಸಾಕು: ಸಚಿವ ಈಶ್ವರಪ್ಪ ಬಹಿರಂಗ ವಿರೋಧ

ಶಿವಮೊಗ್ಗ: ರಾಜ್ಯಾದ್ಯಂತ ವಾರಾಂತ್ಯದ ಕರ್ಫ್ಯೂ ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ಕೋವಿಡ್ ಹತೋಟಿಗೆ ಬೇಕಿದ್ದರೆ ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ. ಅದು ಬಿಟ್ಟು ರಾಜ್ಯಾದ್ಯಂತ  ವೀಕೆಂಡ್ ಕರ್ಫ್ಯೂ ಏಕೆ? ಅದರ ಅಗತ್ಯ ಇಲ್ಲ ಎಂದು ಖಂಡ ತುಂಡವಾಗಿ ಹೇಳಿದ್ದಾರೆ.

ಸರ್ಕಾರದ ನಿರ್ಧಾರ ಕುರಿತು ಗುರುವಾರ ನಿಗದಿಯಾಗಿರುವ ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ. ವೀಕೆಂಡ್ ಕರ್ಫ್ಯೂನಿಂದ ವರ್ತಕರು, ಶ್ರಮಿಕರು ಮತ್ತು ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂದು ಅನೇಕರು ದೂರವಾಣಿ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ ಎಂದರು.

ಈ ನಡುವೆ ನಗರದ ಸಮುದಾಯಭವನವೊಂದರಲ್ಲಿಬುಧವಾರ ಆಯೋಜಿಸಲಾಗಿದ್ದ ಬಿಜೆಪಿ ಹಿಂದುಳಿದ ವರ್ಗ ಘಟಕದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕೋವಿಡ್ ನಿಯಮಗಳನ್ನು ರಾಜಾರೋಷವಾಗಿ ಉಲ್ಲಂಘಿಸಲಾಗಿದೆ. ಸಚಿವರಾದ ಈಶ್ವರಪ್ಪ, ಆರಗ ಜ್ಞಾನೇಂದ್ರ, ಮಾಜಿ ಸಚಿವ ಹಾಲಪ್ಪ ಮತ್ತಿತರರು ಪಾಲ್ಗೊಂಡಿದ್ದರು. ಕಾರ್ಯಕಾರಿಣಿಯಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕೊರೋನಾ ಕಠಿಣ ನಿಯಮ ಉಲ್ಲಂಘಿಸಿ ತೀರ್ಥಹಳ್ಳಿಯಲ್ಲಿ ರಾಮೇಶ್ವರ ದೇಗುಲದ ಜಾತ್ರೆ ನಡೆಸಿರುವುದನ್ನು ಸರ್ಮರ್ಥಿಸಿದ ಈಶ್ವರಪ್ಪ, ಜಾತ್ರೆಯಲ್ಲಿ ಕೋವಿಡ್ ಮುಂಜಾಗ್ರತೆ ವಹಿಸಲಾಗಿದೆ ಎಂದು ಹೇಳಿಕೊಂಡರು.

Spread the love

Related Articles

Leave a Reply

Your email address will not be published. Required fields are marked *

Back to top button