Breaking NewsLatestರಾಷ್ಟ್ರೀಯ

ಮುಂಬೈನಲ್ಲೊಂದು ‘ನಿರ್ಭಯಾ’ ಕೇಸ್; ಅತ್ಯಾಚಾರ ಸಂತ್ರಸ್ತೆ ಆಸ್ಪತ್ರೆಯಲ್ಲಿ ಸಾವು

ಮುಂಬೈ: ನಿರ್ಭಯಾ ಪ್ರಕರಣದಂಋದೇ ಮತ್ತೊಂದು ಭಯಂಕರ ಅತ್ಯಾಚಾರ ಪ್ರಕರಣ ಮುಂಬೈನಲ್ಲಿ ನಡೆದಿದ್ದು. ಅತ್ಯಾಚಾರಕ್ಕೊಳಗಾದ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ ಶುಕ್ರವಾರ ಈ ಅತ್ಯಾಚಾರ ಪ್ರಕರಣ ನಡೆದಿತ್ತು. 34 ವರ್ಷದ ಮಹಿಳೆಯ ಮೇಲೆ ಟೆಂಪೋವೊಂದರಲ್ಲಿ ಅತ್ಯಾಚಾರವೆಸಗಿದ ದುಷ್ಕರ್ಮಿಗಳು, ಬಳಿಕ ಆಕೆಯ ಗುಪ್ತಾಂಗದಲ್ಲಿ ಕಬ್ಬಿಣದ ರಾಡ್ ತೂರಿಸಿ ವಿಕೃತಿ ಮೆರೆದಿದ್ದರು ಎನ್ನಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಶನಿವಾರ ಸಾವನ್ನಪ್ಪಿದ್ದಾಳೆ.

ಅತ್ಯಾಚಾರದ ಬಳಿಕ ಚಿತ್ರಹಿಂಸೆ ನೀಡಿದ್ದಲ್ಲದೆ, ಹಲ್ಲೆಯನ್ನೂ ನಡೆಸಲಾಗಿತ್ತೆಂಬುದು ಗೊತ್ತಾಗಿದೆ. ಅತ್ಯಾಚಾರಕ್ಕೊಳಗಾದ ಬಳಿಕ ತೀವ್ರ ರಕ್ತಸ್ರಾವದಿಂದ ಬಳಲುತ್ತ ರಸ್ತೆಯಲ್ಲಿ ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, 33 ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಅಸುನೀಗಿದ್ದಾಳೆ.

ಆರೋಪಿಗಳಲ್ಲಿ ಒಬ್ಬನಾದ 45 ವರ್ಷದ ಮೋಹನ್ ಚೌಧರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಅತ್ಯಾಚಾರ ಮತ್ತು ಕೊಲೆ ಯತ್ನ ಪ್ರಕರಣವನ್ನು ಅವನ ವಿರುದ್ಧ ದಾಖಲಿಸಲಾಗಿದೆ. ಈಗ ಮಹಿಳೆ ಸಾವನ್ನಪ್ಪಿರುವುದರಿಂದ ಅದನ್ನು ಕೊಲೆ ಎಂದು ಬದಲಿಸುವ ಸಾಧ್ಯತೆಯಿದೆ.

Related Articles

Leave a Reply

Your email address will not be published. Required fields are marked *

Back to top button