Breaking NewsLatestರಾಷ್ಟ್ರೀಯ

ಆಂಧ್ರದಲ್ಲೂ ಪ್ರವಾಹ ಸೃಷ್ಟಿಸುತ್ತಿರುವ ಮಳೆ

ನೆಲ್ಲೂರು: ಆಂಧ್ರಪ್ರದೇಶದ ಅನೇಕ ಭಾಗಗಳಲ್ಲಿ ಭಾರೀ ಮಳೆ ಸಂಭವಿಸಿ, ಪ್ರವಾಹ ಸೃಷ್ಟಿಸುತ್ತಿದ್ದು ರಾಜ್ಯವು NDRF ಮತ್ತು SDRF ಕ್ರಮಕ್ಕೆ ಸಿದ್ಧವಾಗಿದೆ.

ನೆಲ್ಲೂರು ಮತ್ತು ಚಿತ್ತೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ತಿರುಪತಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ನೀರು ನುಗ್ಗಿ ಮರಗಳು ಉರುಳಿವೆ.

ಕಳೆದ ಕೆಲವು ದಿನಗಳಿಂದ ತಮಿಳುನಾಡು ಮತ್ತು ಕೇರಳದಲ್ಲಿ ಮಳೆ ಅಬ್ಬರ ಜೋರಾಗಿದೆ. ಕಡಿಮೆ ಒತ್ತಡದ ಪ್ರದೇಶವು ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತವಾಗಿ ತೀವ್ರಗೊಂಡಿದೆ.

ತಮಿಳುನಾಡು ಮತ್ತು ಆಂಧ್ರದಲ್ಲಿ ಮಳೆಯು ಶುಕ್ರವಾರದ ನಂತರ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಗುರುವಾರ ರಾತ್ರಿ ಟ್ವೀಟ್ ನಲ್ಲಿ ಹೇಳಿದೆ

Spread the love

Related Articles

Leave a Reply

Your email address will not be published. Required fields are marked *

Back to top button