Breaking NewsLatestರಾಜಕೀಯರಾಜ್ಯರಾಷ್ಟ್ರೀಯಸುದ್ದಿ

ಮಗ ಎಂಎಲ್ ಎ ಆದರೂ ಸ್ವೀಪರ್ ಆಗಿಯೇ ಕೆಲಸ ಮುಂದುವರೆಸುವೆ: ಬಲ್ದೇವ್ ಕೌರ್

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬರ್ನಾಲಾ ಜಿಲ್ಲೆಯ ಬದೌರ್ ಎಸ್ ಸಿ ಮೀಸಲಾತಿ ಕ್ಷೇತ್ರದಿಂದ ಸ್ವರ್ಧೆ ಮಾಡಿ ಆಮ್ ಆದ್ಮಿ ಪಕ್ಷದ ಲಾಭ್ ಸಿಂಗ್ ಉಗೋಕೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಮಗ ಗೆದ್ದ ನಂತರವೂ ಲಭ್ ಸಿಂಗ್ ಉಗೋಕೆ ಅವರ ತಾಯಿ ಬಲ್ದೇವ್ ಕೌರ್ ಅವರು ಶನಿವಾರ ಸರ್ಕಾರಿ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವೀಪರ್ ಆಗಿ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ.

ಉಗೋಕೆ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಮುಖ್ಯಮಂತ್ರಿ ಚರಣ್ ಜಿತ್ ಚೆನ್ನಿ ವಿರುದ್ಧ 37 ಸಾವಿರಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಉಗೋಕೆ ಅವರಿಗೆ 63 ಸಾವಿರಕ್ಕೂ ಅಧಿಕ ಮತಗಳು ಸಿಕ್ಕಿದ್ರೆ, ಚೆನ್ನಿ ಪಡೆದುಕೊಂಡಿದ್ದು ಕೇವಲ 26 ಸಾವಿರ ಮತಗಳನ್ನ.

ನಾವು ಬಹಳ ಹಿಂದಿನಿಂದಲೂ ಹಣ ಸಂಪಾದಿಸಲು ಕಷ್ಟಪಟ್ಟು ದುಡಿದಿದ್ದೇನೆ. ನನ್ನ ಮಗ ಈಗ ಶಾಸಕನಾಗಿದ್ದಾನೆ. ಆತ ಗೌರವಾನ್ವಿತ ಸ್ಥಾನ ಪಡೆದಿದ್ದರೂ ನಾನು ನನ್ನ ಹಳೆಯ ಕಾಯಕವನ್ನು ಮುಂದುವರೆಸುತ್ತೇನೆ. ನಾನು ಶಾಲೆಯಲ್ಲಿ ಈ ಮೊದಲು ನಿರ್ವಹಿಸುತ್ತಿದ್ದ ಕರ್ತವ್ಯವನ್ನೇ ಮುಂದುವರಿಸುತ್ತೇನೆ ಎಂದು ಬಲ್ದೇವ್ ಕೌರ್ ಹೇಳಿದ್ದಾರೆ.

ಎಎಪಿ ಅರ್ಭರ್ಥಿಯಾಗಿರೋ ಉಗೋಕೆ ಅವರ ಪಕ್ಷದ ಚಿಹ್ನೆ ಪೊರಕೆಯಾಗಿರೋದಕ್ಕೆ ಉಗೋಕೆ ತಾಯಿ ಬಲ್ದೇವ್ ಅವರಿಗೆ ಸಾಕಷ್ಟು ಖುಷಿ ಇದೆ.  ತಮ್ಮ ಮಗನ ಗೆಲುವು ತಮ್ಮ ಜೀವನದ ಪ್ರಮುಖ ಭಾಗವಾಗಿದೆ ಎಂದು ಖುಷಿಯಲ್ಲಿರೋ ಅವರು  ಪಂಜಾಬ್ ರಾಜ್ಯದ ಮುಖ್ಯಮಂತ್ರಿ ವಿರುದ್ಧ ಸ್ಪರ್ಧಿಸಿದ್ದ ತಮ್ಮ ಮಗ ಗೆಲ್ಲುತ್ತಾನೆ ಎಂದು ಭಾರೀ ವಿಶ್ವಾಸ ಇತ್ತು ಎಂದಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button