Breaking NewsLatestಕಲಬುರ್ಗಿಕ್ರೈಂಜಿಲ್ಲಾ ಸುದ್ದಿರಾಜ್ಯಸುದ್ದಿ

ಪಿಎಸ್ಐ ನೇಮಕಾತಿ ಅಕ್ರಮ: ಮತ್ತೋರ್ವ ಅಭ್ಯರ್ಥಿ ಸಿಐಡಿ ಖೆಡ್ಡಾಗೆ!

ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಮತ್ತೊರ್ವ ಪಿಎಸ್ಐ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಅಫಜಲಪುರ ಮೂಲದ ಎನ್‌.ವಿ ಸುನೀಲ್ ಕುಮಾರ್ ಸಿಐಡಿ ಬಲೆಗೆ ಬಿದ್ದ ಅಭ್ಯರ್ಥಿಯಾಗಿದ್ದಾನೆ. ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆಯಲ್ಲಿ ಬ್ಲೂಟೂತ್ ಡಿವೈಸ್ ಬಳಕೆ ಮಾಡಿ ಪರೀಕ್ಷೆ ಬರೆದಿದ್ದ.

ಆರೋಪಿ ಆರ್‌.ಡಿ ಪಾಟೀಲ್‌ಗೆ 40 ಲಕ್ಷ ರೂಪಾಯಿ ಕೊಟ್ಟು ಅಕ್ರಮವಾಗಿ ಪಿಎಸ್ಐ ಪರೀಕ್ಷೆ ಪಾಸಾಗಿದ್ದ ಸುನೀಲ್. ವಿಚಾರಣೆಗಾಗಿ ಬೆಂಗಳೂರು ಸಿಐಡಿ ಕಚೇರಿಗೆ ಹಾಜರಾಗಿದ್ದ ಸುನೀಲ್ ಕುಮಾರನ ಓಎಂಆರ್ ಶೀಟ್ ‌ನಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಇತ್ತ ಆರೋಪಿ ಆರ್.ಡಿ.ಪಾಟೀಲ್ ಕೂಡಾ ಸುನೀಲ್‌ನನ್ನು ಪಾಸ್ ಮಾಡಿಸಿದ್ದಾಗಿ ಬಾಯಿ ಬಿಟ್ಟಿದ್ದ. ಸದ್ಯ ಸುನೀಲ್ ನನ್ನು ಬೆಂಗಳೂರಿನಿಂದ ಕಲಬುರಗಿಗೆ ಕರೆತಂದಿರುವ ಸಿಐಡಿ ತಂಡ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇಲ್ಲಿಗೆ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button