Breaking Newsರಾಜಕೀಯರಾಷ್ಟ್ರೀಯ

ರಸಗೊಬ್ಬರಕ್ಕಾಗಿ ಕ್ಯೂನಲ್ಲಿದ್ದಾಗ ರೈತ ಸಾವು; ಯುಪಿ ಸರ್ಕಾರದ ವಿರುದ್ಧ ಪ್ರಿಯಾಂಕ ವಾಗ್ದಾಳಿ

ಲಕ್ನೋ: ಉತ್ತರ ಪ್ರದೆಶದ ಲಲಿತ್​ಪುರ ಜಿಲ್ಲೆಯಲ್ಲಿ ರಸಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ಕಾದು ನಿಂತಿದ್ದಾಗ ಕುಸಿದುಬಿದ್ದು ಸಾವನ್ನಪ್ಪಿದ ರೈತನ ಕುಟುಂಬವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಶುಕ್ರವಾರ ಭೇಟಿಯಾಗಿ ಸಾಂತ್ವನ ಹೇಳಿದರು.

ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವಲ್ಲಿ ಉತ್ತರ ಪ್ರದೇಶ ಸರ್ಕಾರ ವಿಫಲಾವಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಡಿಮೆ ಪ್ರಮಾಣದ ರಸಗೊಬ್ಬರವನ್ನು ನೀಡಲಾಗುತ್ತಿದ್ದು, ಬೆಲೆ ಹೆಚ್ಚಿಸಲಾಗಿದೆ. ರೈತರಿಗೆ ಸಾಕಷ್ಟು ಸಮಸ್ಯೆಗಳಿವೆ. ಆದರೆ ಸರ್ಕಾರ ಕೇಳುತ್ತಿಲ್ಲ. ರೈತರು ತಿಂಗಳಾನುಗಟ್ಟಲೆ ರಸ್ತೆಗಿಳಿದಿರುವುದು ಅವರಿಗೆ ಗೊತ್ತಿದೆ. ಅವರನ್ನು ವಾಹನ ಹಾಯಿಸಿ ಕೊಲ್ಲಲಾಗುತ್ತಿದೆ ಎಂದು ಪ್ರಯಾಂಕ ಗಾಂಧಿ ಟೀಕಿಸಿದರು.

ನೋವು ಹಂಚಿಕೊಳ್ಳುವುದು ನಮ್ಮ ಸಂಪ್ರದಾಯ. ಗ್ರಾಮದ ನೋವು, ಬಡವರು, ಕಾರ್ಮಿಕರು, ರೈತರ ನೋವು ಕಾಂಗ್ರೆಸ್‌ನ ನೋವು ಎಂದು ಪ್ರಿಯಾಂಕ ಈ ಸಂದರ್ಭದಲ್ಲಿ ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button