Breaking NewsLatestರಾಜಕೀಯರಾಜ್ಯ
ಏನೂ ಮಾಡದವರು ಹೆಸರನ್ನಷ್ಟೇ ಬದಲಿಸುತ್ತಿದ್ದಾರೆ; ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಬೆಂಗಳೂರು: ಏನೋ ಮಾಡಿಬಿಡುತ್ತೇವೆ ಎಂದು ಅಧಿಕಾರಕ್ಕೆ ಬಂದಿದ್ದ ಬಿಜಪಿಗೆ ಯಾವ ಶಾಧನೆಯನ್ನೂ ಮಾಡಲಿಕ್ಕಾಗಲಿಲ್ಲ. ಹುಳುಕು ಮುಚ್ಚಿಕೊಳ್ಳಲು, ಈಗಾಗಲೇ ಇರುವ ಯೋಜನೆ, ಸಾಧನೆಗಳ ಹೆಸರು ಬದಲಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಸಿಟಿ ರವಿ ಹುಕ್ಕಾಬಾರ್ ಹೇಳಿಕೆ ವ್ಯಾಪಕ ಟೀಕೆಗೆ ಒಳಗಾಗಿದ್ದು, ವಾಜಪೇಯಿ ವಿಸ್ಕಿ ಪ್ರಿಯರಾಗಿದ್ದರು. ಹಾಗೆಂದು ವಿಸ್ಕಿ ಬಾರ್ಗಳಿಗೆ ಅವರ ಹೆಸರನ್ನಿಡುತ್ತದೆಯೇ ಬಿಜೆಪಿ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಹಲವಾರು ಬಿಜೆಪಿ ನಾಯಕರು ಸೆಕ್ಸ್ ಸಿ.ಡಿ ಹಗರಣದಲ್ಲಿ ಸಿಲುಕಿದ್ದಾರೆ. ಹಾಗಾದರೆ ಬಿಜೆಪಿ ಯಾವ ಥರದ ಸಂಸ್ತೆಗಳನ್ನು ಕಟ್ಟಲಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
