Breaking NewsLatestರಾಜಕೀಯರಾಷ್ಟ್ರೀಯಸುದ್ದಿ

ರೈತರು ವರ್ಷ ಕಾದರು, ಪ್ರಧಾನಿ 15 ನಿಮಿಷ ಕಾದಿದ್ದೆ ದೊಡ್ಡದೆ? ಸಿಧು ಲೇವಡಿ

ಅಮೃತಸರ:ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ರೈತರು ಬಿಸಿಲು-ಮಳೆ -ಗಾಳಿ ಲೆಕ್ಕಿಸದೆ ರಸ್ತೆಯಲ್ಲೆ ಒಂದು ವರ್ಷಗಳ ಕಳೆದಿದ್ದಾರೆ. ಅವರ ನೋವು -ಸಂಕಟಕ್ಕಿಂತ ಪ್ರಧಾನಿ 15 20 ನಿಮಿಷ ಕಾದಿದ್ಧೇ ಬಹಳ ದೊಡ್ಡ ಸುದ್ದಿಯೇ? ಬಹಳ ದೊಡ್ಡದೆ? ಎಂದು ಪಂಜಾಬ್ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಲೇವಡಿಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವರ್ಷ ರೈತರು ಪಡಬಾರದ ಯಮಯಾತನೆ ಅನುಭವಿಸಿದ್ದಾರೆ ಅವರ ಮುಂದೆ ಪ್ರಧಾನಿ 15- 20 ನಿಮಿಷ ಕಳೆದದ್ದು ಯಾವ ಮಹಾ ಲೆಕ್ಕ ಎಂದು ಚಾಟಿ ಬೀಸಿದ್ದಾರೆ.
ರೈತರ ಆದಾಯ ದುಪ್ಪಟ್ಟು ಗೊಳಿಸುವುದಾಗಿ ಹೇಳುತ್ತಾ ಬಂದಿದ್ದ ಕೇಂದ್ರ ಸರ್ಕಾರ ರೈತರ ಇದ್ದ ಆದಾಯವನ್ನು ಕಸಿಯುತ್ತಿದೆ ಎಂದು ದೂರಿದರು.


ಪಂಜಾಬಿನಲ್ಲಿ ಪ್ರಧಾನಮಂತ್ರಿಯವರ ಚುನಾವಣಾ ಸಭೆಗೆ ಜನರು ಬಾರದಿದ್ದರೂ ಅದರ ಗಮನವನ್ನು ಬೇರೆ ಕಡೆಗೆ ತಿರುಗಿಸಲು ಭದ್ರತಾ ಲೋಪದ ಆರೋಪ ಹೊರಿಸಲಾಗಿದೆ ಎಂದು ಸಿಧು ದೂರಿದರು.

ಇದಕ್ಕೂ ಮುನ್ನ ಮಾತನಾಡಿದ್ದ ರಾಜ್ಯ ಬಿಜೆಪಿ ಮುಖ್ಯಸ್ಥ ಅಶ್ವಿನಿ ಶರ್ಮ ಪ್ರಧಾನಿ ಚುನಾವಣಾ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರೇ ಬಂದಿರಲಿಲ್ಲ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button