ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಬೆಳಗ್ಗೆಯಿಂದ ಸಂಜೆ 4ರವರೆಗೆ ಪವರ್ ಕಟ್

ಬೆಂಗಳೂರು: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದಿನಿಂದ ಅ. 31ರವರೆಗೆ ಪವರ್ ಕಟ್ ಇರಲಿದೆ.
ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಕೈಗೊಂಡಿರುವ ನಿರ್ವಹಣಾ ಕಾರ್ಯದಿಂದಾಗಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಇಂದು ಪವರ್ ಕಟ್ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಘೋಷಿಸಿದೆ.
ಬೆಂಗಳೂರಿನ ಹಲವು ಏರಿಯಾಗಳಲ್ಲಿ ಅಕ್ಟೋಬರ್ 31ರವರೆಗೆ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಇಂದು (ಅಕ್ಟೋಬರ್ 28) ಬೆಂಗಳೂರಿನ ಮಹಿಳಾ ಕಾಂಪ್ಲೆಕ್ಸ್, ಬಿಗ್ ಬಜಾರ್, ಜಾಯ್ ಅಲ್ಲುಕಾಸ್, ಮಹಾನಗರ ಪಾಲಿಕೆ, ಗುಂಡಿ ಚೌಲ್ಟ್ರಿ ಹಿಂಭಾಗ, ಎಂಸಿಸಿಬಿ ಬ್ಲಾಕ್, ಎವಿಕೆ ಕಾಲೇಜು ರಸ್ತೆ, ಕೋರ್ಟ್ ರಸ್ತೆ, ರತ್ನಮ್ಮ ಹಾಸ್ಟೆಲ್, ಮುಸ್ಲಿಂ ಕಾಂಪ್ಲೆಕ್ಸ್, ಹಳೆಯ ಬಸ್ ನಿಲ್ದಾಣ, ಪಿಡಬ್ಲ್ಯೂಡಿ ವಿಭಾಗ, ಪಂಚಾಯತ್ ರಾಜ್, ಶಾಂತಿ ಕಂಫರ್ಟ್ಸ್, ಪೊಲೀಸ್ ಕ್ವಾರ್ಟರ್ಸ್ ಎಂಎಸ್ ಬಿಲ್ಡಿಂಗ್, ಅರುಣಾ ಥಿಯೇಟರ್, ಪಶು ವೈದ್ಯಕೀಯ ಆಸ್ಪತ್ರೆ, ಸಿತಾರಾ ಹೋಟೆಲ್ ಮತ್ತು ಪಿಸಾಲೆ ಕಾಂಪೌಂಡ್ ಪ್ರದೇಶಗಳು, ಶಂಕರ್ ವಿಹಾರ್ ಲೇಔಟ್, ಪಿಬಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಬಿಎಸ್‌ಎನ್‌ಎಲ್ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ, ವಿನಾಯಕ ನಗರ, ಸಾಯಿ ಇಂಟರ್ನ್ಯಾಷನಲ್ ಹೋಟೆಲ್, ಪೂಜಾ ಇಂಟರ್‌ನ್ಯಾಶನಲ್ ಹೋಟೆಲ್, ದೇವರಾಜ್ ಅರಸ್ ಲೇಔಟ್ ಬಿ ಬ್ಲಾಕ್, ಗಿರಿಯಪ್ಪ ಲೇಔಟ್ ಮತ್ತು ಜಿಎಂಐಟಿ ಕಾಲೇಜು, 6ನೇ ಮುಖ್ಯರಸ್ತೆ ಎಂಸಿಸಿ ಬಿ ಬ್ಲಾಕ್, ಲಕ್ಷ್ಮೀ ಫ್ಲೋರ್ ಮಿಲ್, ಕುವೆಂಪು ನಗರ, ಎಸ್ ಎಸ್ ಲೇಔಟ್ ಎ ಬ್ಲಾಕ್, ಎಸ್ ಎಸ್ ಮಹಲ್, ಮಾವಿಂಟಾಪ್ ಆಸ್ಪತ್ರೆ, ಕರ್ನಾಟಕ ಬ್ಯಾಂಕ್ ಬಲಭಾಗ, ಅಂಗವಿಕಲರ ಹಾಸ್ಟೆಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.
